ಕಾಸರಗೋಡು: ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯಾರ್ ಗೆಲುವಿನ ನಗೆ ಬೀರಿದ್ದಾರೆ.
ಯುಡಿಎಫ್ ಮತ್ತು ಎಲ್ ಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ತ್ರಿಕ್ಕರಿಪುರ ಕ್ಷೇತ್ರದಲ್ಲಿ ಅಂತಿಮವಾಗಿ ಸಂದೀಪ್ ವಾರಿಯಾರ್ (ಕಾಂಗ್ರೆಸ್) 4,431 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಂದೀಪ್ ವಾರಿಯಾರ್ 83109 ಮತಗಳನ್ನು ಗಳಿಸಿದರೆ, ಎಲ್ ಡಿಎಫ್ ಅಭ್ಯರ್ಥಿ ವಿ.ಪಿ.ಪಿ.ಮುಸ್ತಫ 78678 ಮತಗಳನ್ನು ಗಳಿಸಿ ಸೋಲುಂಡಿದ್ದಾರೆ. ಎನ್ ಡಿಎ ಅಭ್ಯರ್ಥಿ ರವಿ ಕುಳಂಗರ 7837 ಮತಗಳನ್ನು ಗಳಿಸಲು ಶಕ್ತರಾಗಿದ್ದಾರೆ.
2ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆ ಸಂದೀಪ್ ವಾರಿಯರ್ 2,382 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ 3ನೇ ಸುತ್ತಿನಲ್ಲಿ ವಿ.ಪಿ.ಪಿ.ಮುಸ್ತಫ 3,366 ಮತಗಳ ಮುನ್ನಡೆ ಸಾಧಿಸಿದ್ದರು. ಬಳಿಕ ಸುತ್ತಿನಲ್ಲಿ ಮುನ್ನಡೆ ಗಳಿಸಿದ ಸಂದೀಪ್ ವಾರಿಯರ್ ಅಂತಿಮವಾಗಿ ಗೆಲುವಿನ ನಗೆ ಬೀರಿದರು.

