ಗೊತೆನ್‌ಬರ್ಗ್ : ನೆದರ್ಲೆಂಡ್ಸ್ ಭೇಟಿ ಬಳಿಕ ಭಾನುವಾರ ಸ್ವೀಡನ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟೆರ್‌ಸನ್ ಜತೆ ಮಾತುಕತೆ ನಡೆಸಿದರು. ಭಾರತ-ಸ್ವೀಡನ್ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.
ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಬಾಹ್ಯಾಕಾಶ, ರಕ್ಷಣೆ, ಭದ್ರತೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಸಂಶೋಧನಾ ಕ್ಷೇತ್ರಗಳಲ್ಲಿ ಸಂಬಂಧ ಬಲಗೊಳಿಸುವ ಬಗ್ಗೆ ಚರ್ಚಿಸಿದರು.
ಭಾರತ-ಸ್ವೀಡನ್ ಸಂಬಂಧ ವೃದ್ಧಿಗೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಮೋದಿ ಅವರಿಗೆ ಸ್ವೀಡನ್ ಸರ್ಕಾರದ ಪ್ರತಿಷ್ಠಿತ 'ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು.

