HEALTH TIPS

KERALA ನೂತನ ಸಚಿವ ಸಂಪುಟ ಘೋಷಿಸಿದ ಸತೀಶನ್: ಚೆನ್ನಿತ್ತಲ, ಮುರಳೀಧರನ್‌ಗೆ ಸ್ಥಾನ

 ತಿರುವನಂತಪುರ: ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ನೂತನ ಸಚಿವ ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದನ್ನು ಭಾನುವಾರ(ಮೇ 17) ಘೋಷಿಸಿದ್ದಾರೆ.

ಮೇ 18 ರಂದು ತಿರುವನಂತಪುರದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.


ಮಿತ್ರಪಕ್ಷಗಳ ನಾಯಕರ ಜೊತೆ ಚರ್ಚಿಸಿ ಸಚಿವ ಸಂಪುಟದ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನವನ್ನು ಗಣನೆಗೆ ತೆಗೆದುಕೊಂಡು ಸಚಿವರನ್ನು ಆಯ್ಕೆ ಮಾಡಲಾಗಿದೆ. ಹಾಗಾಗಿ, ಸಾಮರ್ಥ್ಯವಿರುವ ಕೆಲವು ನಾಯಕರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ ಎಂದು ವಿ.ಡಿ. ಸತೀಶನ್ ಹೇಳಿದ್ದಾರೆ.

ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್ ಮತ್ತು ಸನ್ನಿ ಜೋಸೆಫ್ ಸೇರಿದಂತೆ ಪ್ರಮುಖ ನಾಯಕರು ಸತೀಶನ್ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಹಿರಿಯ ಶಾಸಕ ತಿರುವಂಕೂರು ರಾಧಾಕೃಷ್ಣನ್ ಅವರನ್ನು ವಿಧಾನಸಭೆ ಸಭಾಪತಿ ಮತ್ತು ಶಾನಿಮೋಲ್ ಉಸ್ಮಾನ್ ಅವರನ್ನು ಉಪಸಭಾಪತಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೈತ್ರಿಪಕ್ಷಗಳೊಂದಿಗೆ ಮಾತನಾಡಿ, ಈಗಾಗಲೇ ಖಾತೆಗಳನ್ನು ಕೂಡ ಹಂಚಲಾಗಿದ್ದು, ಕೆಲವು ಚಿಕ್ಕಪುಟ್ಟ ಬದಲಾವಣೆಗಳು ಉಳಿದುಕೊಂಡಿವೆ. ಅಂತಿಮ ಪಟ್ಟಿಯನ್ನು ಔಪಚಾರಿಕವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ ಮತ್ತು ಅನುಮೋದನೆಯ ನಂತರ ಅಧಿಕೃತ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ನೂತನ ಸಚಿವ ಸಂಪುಟದ ಸದಸ್ಯರು: ರಮೇಶ್ ಚೆನ್ನಿತ್ತಲ, ಪಿ.ಕೆ. ಕುಂಞಾಲಿಕುಟ್ಟಿ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಮೋನ್ಸ್ ಜೋಸೆಫ್, ಶಿಬು ಬೇಬಿ ಜಾನ್, ಅನೂಪ್ ಜೇಕಬ್, ಸಿ.ಪಿ. ಜಾನ್, ಎ.ಪಿ. ಅನಿಲ್ ಕುಮಾರ್, ಎನ್. ಶಂಸುದ್ದೀನ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ.ಲಿಜು, ಟಿ. ಸಿದ್ದೀಖ್, ಕೆ.ಎಂ. ಶಾಜಿ, ಪಿ.ಕೆ. ಬಷೀರ್, ವಿ.ಇ. ಅಬ್ದುಲ್ ಗಫೂರ್, ಕೆ.ಎ. ತುಳಸಿ, ಒ.ಜೆ. ಜನೀಶ್,







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries