ಪೆರ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐಸಿಡಿಎಸ್ ಮಂಜೇಶ್ವರ ಹೆಚ್ಚುವರಿ ವಿಭಾಗ ಮತ್ತು ಎಣ್ಮಕಜೆ ಗ್ರಾಪಂ ಸಹಯೋಗದಲ್ಲಿ ಮಕ್ಕಳ ನಾಲ್ಕು ದಿನಗಳ "ವೇನಲ್ ಚಿರಿ" (ಬೇಸಿಗೆ ನಗು) ಶಿಬಿರಕ್ಕೆ ಚಾಲನೆ ನೀಡಲಾಯಿತು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ. ಶಿಬಿರವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯ ಕೆ.ಸಿ., ಸದಸ್ಯರುಗಳಾದ ಆಯಿಷಾ ಎ.ಎ., ಕೃಷ್ಣಪ್ಪ, ಪುಷ್ಪಾವತಿ ಶುಭ ಹಾರೈಸಿದರು.
ಐಸಿಡಿಎಸ್ ಉಸ್ತುವಾರಿ ಅಧಿಕಾರಿ ಲಿಸ್ಸಿ ಸ್ವಾಗತಿಸಿದರು. ಪಿಎಸ್‍ಎಸ್ ಕೌನ್ಸಿಲರ್ ಅಶ್ವಿತಾ ಕೆ. ವಂದಿಸಿದರು. ಪೆರ್ಲ ಆರೋಗ್ಯ ಕೇಂದ್ರದ ಜೂ. ಆರೋಗ್ಯ ಅಧಿಕಾರಿ ಹರಿದಾಸ್ ತರಗತಿ ನೀಡಿದರು. ಪಿಎಸ್‍ಎಸ್ ಕೌನ್ಸಿಲರ್‍ಗಳಾದ ಸ್ವಾತಿ ಸುಧಾಕರನ್ ಮತ್ತು ಕೀರ್ತಿ ಬಿ.ಕೆ. ನೇತೃತ್ವ ವಹಿಸಿದ್ದರು.

.jpg)
