ಕಾಸರಗೋಡು: ನಗರಸಭೆಯ ಮಳೆಗಾಲ ಪೂರ್ವ ಸ್ವಚ್ಛತಾ ಅಭಿಯಾನದ ಅಂಗವಾಗಿ ಆಯೋಜಿಸಲಾದ ಬೃಹತ್ ಸ್ವಚ್ಛತಾ ಅಭಿಯಾನ, ಸ್ವಚ್ಛ ಸರ್ವೇಕ್ಷಣ್ ಮತ್ತು ಕೆಎಸ್‍ಡಬ್ಲ್ಯೂಎಂಪಿ ಕಾಸರಗೋಡಿನಲ್ಲಿ ಪ್ರಾರಂಭವಾಯಿತು. ಕಾರ್ಯಕ್ರಮದ ಅಧಿಕೃತ ಉದ್ಘಾಟನೆಯನ್ನು ನಗರಸಭೆಯು 'ನಮ್ಮ ನಗರ ನಮ್ಮ ಜವಾಬ್ದಾರಿ' ಎಂಬ ಸಂದೇಶದ ಮೂಲಕ ನಗರವನ್ನು ಕಸ ಮುಕ್ತಗೊಳಿಸುವ ಉದ್ದೇಶದೊಂದಿಗೆ ಅಧ್ಯಕ್ಷೆ ಶಾಹಿನಾ ಸಲೀಂ ಮೂರು ದಿನಗಳ ತೀವ್ರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಳನೆ ನೀಡಿದರು.
ಕಾಸರಗೋಡು ಹಳೇ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್, ಆರೋಗ್ಯ ಸ್ಥಾಯಿ ಸಮಿತಿಅಧ್ಯಕ್ಷೆ ಮೆಹರುನ್ನೀಸಾ ಹಮೀದ್, ಸೆಮಿನಾ ಮುಜೀಬ್, ಹಮೀದ್ ಬೆದಿರ, ಜಾಫರ್ ಕಮಲ್, ನಗರಸಭೆ ಸದಸ್ಯರು, ನಗರಸಭೆ ಕಾರ್ಯದರ್ಶಿ ಪಿ.ಬಿ. ಶಾಜು, ಎಚ್.ಎಸ್., ಮಧುಸೂಧನನ್ ಮೊದಲಾದವರು ಉಪಸ್ಥಿತರಿದ್ದರು.
ಮೊದಲ ದಿನ ನಗರಸಭಾ ನೌಕರರಿಂದ ಕಚೇರಿ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶುಚೀಕರಣ ಆರಂಭಿಸಲಾಯಿತು. ಮೂರನೇ ದಿನ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೌನ್ಸಿಲರ್‍ಗಳು, ಶುಚಿತ್ವ ಮಿಷನ್, ಕೆಎಸ್‍ಡಬ್ಲ್ಯೂಎಂಪಿ, ಕುಟುಂಬಶ್ರೀ, ಎನ್ನೆಸ್ಸೆಸ್-ಎನ್‍ಸಿಸಿ ಕೆಡೆಟ್‍ಗಳು, ವ್ಯಾಪಾರಿಗಳು, ಉದ್ಯಮಿಗಳು, ಹೋಟೆಲ್ ಮತು ರೆಸ್ಟೋರೆಂಟ್ ಅಸೋಸಿಯೇಷನ್‍ನ ಪ್ರತಿನಿಧಿಗಳು, ಹಸಿರು ಕ್ರಿಯಾ ಸೇನೆಯ ಸದಸ್ಯರು, ಸಾಮಾಜಿಕ-ರಾಜಕೀಯ ಕಾರ್ಯಕರ್ತರು ಮತ್ತು ಎಲ್ಲಾ ವರ್ಗದ ಜನರು ಭಾಗವಹಿಸಿದ್ದರು.

