HEALTH TIPS

ಪರಾಭವಗೊಂಡವರು ಕೇವಲ ಇಬ್ಬರು ಡಿಸಿಸಿ ಅಧ್ಯಕ್ಷರು; ಐದು ಜಿಲ್ಲೆಗಳಲ್ಲಿ ಕಾಂಗ್ರೆಸ್‍ಗೆ ಹೊಸ ಅಧ್ಯಕ್ಷರ ಆಯ್ಕೆ ನಿರೀಕ್ಷೆ

ಕೊಚ್ಚಿ: ಸ್ಪರ್ಧಿಸಿದ ಏಳು ಡಿಸಿಸಿ ಅಧ್ಯಕ್ಷರಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಗೆದ್ದಿರುವುದರಿಂದ, ಐದು ಜಿಲ್ಲೆಗಳಲ್ಲಿ ಕಾಂಗ್ರೆಸ್‍ಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಸಬೇಕಾಗಿದೆ. ರಾಜ್ಯದಲ್ಲಿ ಕೋಮು ಸಮೀಕರಣಗಳು ಮತ್ತು ಹೊಸ ನಾಯಕತ್ವದ ಹಿತಾಸಕ್ತಿಗಳನ್ನು ಪರಿಗಣಿಸಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮುಖ್ಯಮಂತ್ರಿಯ ನಂತರ ಪಕ್ಷವು ಪುನರ್‍ಸಂಘಟನೆಯಾಗುತ್ತದೆ ಮತ್ತು ಅದರ ನಂತರ ಸಚಿವರು ಇಲಾಖಾ ವಿಭಾಗವನ್ನು ಪೂರ್ಣಗೊಳಿಸುತ್ತಾರೆ. 


ತಿರುವನಂತಪುರಂ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಳಂ, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳ ಡಿಸಿಸಿ ಅಧ್ಯಕ್ಷರು ಎನ್. ಶಕ್ತಿನ್, ಸತೀಶ್ ಕೊಚುಪರಂಬಿಲ್, ನಟ್ಟಕಮ್ ಸುರೇಶ್, ಮುಹಮ್ಮದ್ ಶಿಯಾಸ್, ಎ. ತಂಗಪ್ಪನ್, ವಿ.ಎಸ್. ಜಾಯ್ ಮತ್ತು ಕೆ. ಪ್ರವೀಣ್ ಕುಮಾರ್ ಸ್ಪರ್ಧಿಸಿದ್ದರು. ಇದರಲ್ಲಿ, ಶಕ್ತನ್ (ನೆಯ್ಯಾಟ್ಟಿಂಗರ), ನಟ್ಟಕಮ್ ಸುರೇಶ್ (ಏಟ್ಟಮನೂರ್), ಮುಹಮ್ಮದ್ ಶಿಯಾಸ್ (ಕೊಚ್ಚಿ), ವಿ.ಎಸ್. ಜಾಯ್ (ಮಲಪ್ಪುರಂ), ಮತ್ತು ಕೆ. ಪ್ರವೀಣ್ ಕುಮಾರ್ (ಕೊಯಿಲಾಂಡಿ)ಯಿಂದ ಗೆದ್ದಿರುವರು. 

ಪಾಲಕ್ಕಾಡ್ ಜಿಲ್ಲೆಯ ನೆನ್ಮಾರಾದಿಂದ ಸ್ಪರ್ಧಿಸಿದ್ದ ಎ.ತಂಗಪ್ಪನ್ ಎಲ್ ಡಿಎಫ್ ನ ಕೆ.ಪ್ರೇಮನ್ ವಿರುದ್ಧ ಸೋತಿದ್ದು, ಪತ್ತನಂತಿಟ್ಟದ ಕೊನ್ನಿಯಿಂದ ಜನಾದೇಶ ಬಯಸಿದ್ದ ಸತೀಶ್ ಕೊಚ್ಚುಪರಂಪಿಲ್ ಎಲ್ ಡಿಎಫ್ ನ ಕೆ.ಯು. ಜನೀಶ್ ಕುಮಾರ್ ವಿರುದ್ದ ಪರಾಭವಗೊಮಡಿರುವರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries