HEALTH TIPS

ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ತವರಿನಲ್ಲಿ 'ಕೇಸರಿ' ದಿಗ್ವಿಜಯ

 ಕೋಲ್ಕತ್ತ: ಪಶ್ಚಿಮ ಬಂಗಾಳ. ವಿಧಾನಸಭಾ ಚುನಾವಣೆಯಲ್ಲಿ 206 ಕ್ಷೇತ್ರಗಳಲ್ಲಿ ಜಯಗಳಿಸಿದ ಬಿಜೆಪಿ, 15 ವರ್ಷಗಳಿಂದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಛಿದ್ರ ಮಾಡಿ ಅಭೂತಪೂರ್ವ ಗೆಲುವು ದಾಖಲಿಸಿದೆ.


ಈ ಗೆಲುವು ಕೇಸರಿ ಪಕ್ಷಕ್ಕೆ ಮತ ಲೆಕ್ಕ ಹಾಕುವ ಕ್ಷಣವಷ್ಟೇ ಅಲ್ಲ, ಹೆಮ್ಮೆಯ ಕ್ಷಣವೂ ಆಗಿದೆ.

ಏಕೆಂದರೆ ಬಿಜೆಪಿಯ ಪೂರ್ವಾಶ್ರಮ 'ಜನಸಂಘದ' ಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಅವರ ತವರಿನಲ್ಲಿ ಗೆದ್ದು ಬೀಗಿದೆ. ದೇಶದ ಉದ್ದಗಲಕ್ಕೂ ಗೆಲುವಿನ ಪತಾಕೆ ಹಾರಿಸಿದ ಬಿಜೆಪಿ, ಬಂಗಾಳದಲ್ಲಿ ಅಧಿಕಾರ ಪಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅಲ್ಲೂ ಗೆಲ್ಲುವ ಮೂಲಕ ಪಕ್ಷದ ಸ್ಥಾಪಕರ ತವರಲ್ಲಿ ಚುಕ್ಕಾಣಿಗೇರಿದಂತಾಗಿದೆ.

ಮುಖರ್ಜಿ ಅವರ 125ನೇ ವರ್ಷಾಚರಣೆ ಹೊತ್ತಿನಲ್ಲಿ ಬಿಜೆಪಿ ಬಂಗಾಳವನ್ನು ತೆಕ್ಕೆಗೆ ತೆಗೆದುಕೊಂಡಿದೆ. (ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ವಾರ್ಷಿಕೋತ್ಸವವನ್ನು ಭಾರತ ಸರ್ಕಾರವು 2025 6 ಜುಲೈ ರಿಂದ 2027 6 ಜುಲ ರವರೆಗೆ ಎರಡು ವರ್ಷಗಳ ಕಾಲ ಆಚರಿಸುತ್ತಿದೆ) ಪ್ರಧಾನಿ ಮೋದಿ ಮತ್ತು ಅಮಿತ್ ಶಾ 'ಬಿಜೆಪಿಯ ಡಿಎನ್‌ಎ ಬಂಗಾಳದ ಮಣ್ಣಿನಲ್ಲಿದೆ' ಎಂದು ಹೇಳುವುದಕ್ಕೂ ಇದೇ ಕಾರಣ.

ಪಶ್ಚಿಮ ಬಂಗಾಳ: ಬಿಜೆಪಿಯ ದಶಕದ ಶ್ರಮಕ್ಕೆ ಪ್ರತಿ ಫಲಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಅಡಿಪಾಯಗಂಗಾಸಾಗರದವರೆಗೆ ಅರಳಿದ ಕಮಲ: ಪಂಚರಾಜ್ಯಗಳ ಜನತೆಗೆ ಧನ್ಯವಾದ ತಿಳಿಸಿದ ಮೋದಿಇಡೀ ಕೇಂದ್ರ ಸಂಪುಟ ಬಂದರೂ ಬಂಗಾಳ ಗೆಲ್ಲಲಾಗದು: ಮಮತಾ ಬ್ಯಾನರ್ಜಿ

ಕುಗ್ಗಿದ್ದ ಬಿಜೆಪಿ

ಮುಖರ್ಜಿಯವರ ಅಕಾಲಿಕ ಮರಣದ ನಂತರ, ಬಂಗಾಳದಲ್ಲಿ ಜನಸಂಘದ ಪ್ರಭಾವ ಕುಗ್ಗಿತ್ತು. ನಂತರದ ದಶಕಗಳಲ್ಲಿ ಬಂಗಾಳವು ಕಾಂಗ್ರೆಸ್ ಮತ್ತು ಮುಖ್ಯವಾಗಿ ಎಡರಂಗದ ಭದ್ರಕೋಟೆಯಾಯಿತು. 1982 ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದ ಮೇಲೂ, ಬಂಗಾಳದಲ್ಲಿ ಕೇವಲ ಸಣ್ಣ ಪಕ್ಷವಾಗಿಯೇ ಉಳಿಯಿತು. ಅಲ್ಲಿನ ರಾಜಕೀಯವು ಕಮ್ಯುನಿಸ್ಟ್ ಮತ್ತು ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ನಡುವೆ ಸೀಮಿತವಾಗಿತ್ತು. 2014ರ ಲೋಕಸಭಾ ಚುನಾವಣೆ ನಂತರ ಬಿಜೆಪಿಯ 'ಮಿಷನ್ ಬೆಂಗಾಲ್' ತೀವ್ರಗೊಂಡಿತ್ತು. 2011ರಲ್ಲಿ ಶೇ 4ರಷ್ಟಿದ್ದ ಮತ ಹಂಚಿಕೆ, 2019ರ ಲೋಕಸಭೆ ಚುನಾವಣೆಯಲ್ಲಿ ಸುಮಾರು ಶೇ 40ಕ್ಕೆ ಏರಿತ್ತು.

ಮೋದಿ-ಅಮಿತ್‌ ಶಾ ಕಸರತ್ತು

ಇಂದು ಬಂಗಾಳದಲ್ಲಿ ಬಿಜೆಪಿ ಅಸ್ತಿತ್ವ ಸ್ಥಾಪಿಸುವುದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ತಂತ್ರಗಾರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದೀದಿ ಕಪಿಮುಷ್ಠಿಯಲ್ಲಿದ್ದ ಬಂಗಾಳವನ್ನು ಹೊರತರುವುದು ಸುಲಭವೇನಾಗಿರಲಿಲ್ಲ. ಆದರೆ ತೃಣಮೂಲ ಕಾಂಗ್ರೆಸ್‌ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಮತವಾಗಿ ಪರಿವರ್ತಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ವರ್ಷಗಳ ಹೋರಾಟ

2016ರ ನಂತರ ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಾಳಯ ಚಿಗುರೊಡೆಯಲು ಪ್ರಾರಂಭಿಸಿತ್ತು. 2016 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 3 ಸ್ಥಾನಗಳನ್ನು ಗೆದ್ದಿತ್ತು, ಅಲ್ಲಿಂದಲೇ ಪಕ್ಷದ ಬಲವರ್ಧನೆಗೆ ಕೆಲಸ ಜೋರಾಗಿತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ, ಅಂದರೆ 2021 ರಲ್ಲಿ, ಬಿಜೆಪಿ 77 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು, ಇದು 2016 ರಲ್ಲಿನ ಅದರ ಹಿಂದಿನ ಸಾಧನೆಗಿಂತ ಉತ್ತಮವಾಗಿತ್ತು. ಬಿಜೆಪಿ ಮತ್ತು ಟಿಎಂಸಿ ನಡುವಿನ ಮತ ಹಂಚಿಕೆಯ ವಿಷಯದಲ್ಲಿ ಶೇಕಡಾ 10 ರಷ್ಟಿತ್ತು. ಈಗ 2026ರಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries