HEALTH TIPS

ಭಾರತದ ಇಬ್ಬರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ: ಯಾರವರು, ಹಿನ್ನೆಲೆಯೇನು?

ನವದೆಹಲಿ: ಡಿಜಿಟಲ್ ಕಣ್ಗಾವಲು ಮತ್ತು ಸೈಬರ್ ವಂಚನೆ ಕುರಿತ ವರದಿಗಾಗಿ ಭಾರತದ ಇಬ್ಬರು ಪತ್ರಕರ್ತರು ಪ್ರತಿಷ್ಟಿತ ಪುಲಿಟ್ಜರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂಬೈ ಮೂಲದ ಆನಂದ್‌ ಆರ್‌.ಕೆ ಮತ್ತು ದೆಹಲಿ ಮೂಲದ ಸುಪರ್ಣಾ ಶರ್ಮಾ ಪ್ರಶಸ್ತಿ ಗೆದ್ದ ಪತ್ರಕರ್ತರು.

'ಇಲಸ್ಟ್ರೇಟೆಡ್ ರಿಪೋರ್ಟಿಂಗ್ ಮತ್ತು ಕಾಮೆಂಟರಿ' ವಿಭಾಗದಲ್ಲಿ ಇಬ್ಬರೂ ಪ್ರಶಸ್ತಿ ಪಡೆದಿದ್ದಾರೆ. ಅವರು ಬ್ಲೂಮ್‌ಬರ್ಗ್‌ನ ನಟಾಲಿ ಒಬಿಕೊ ಪಿಯರ್ಸನ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ನಟಾಲಿ ಅವರು ಭಾರತ ಮತ್ತು ಲ್ಯಾಟಿನ್ ಅಮೆರಿಕದಲ್ಲಿನ ರಾಜಕೀಯ ಬದಲಾವಣೆಗಳು, ಇಂಧನ ಮಾರುಕಟ್ಟೆ ಸೇರಿದಂತೆ ಪ್ರಮುಖ ಜಾಗತಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ.

ಪುಲಿಟ್ಜರ್‌ ವೆಬ್‌ಸೈಟ್‌ ಪ್ರಕಾರ, ಬ್ಲೂಮ್‌ಬರ್ಗ್‌ಗೆಂದು ತಯಾರಿಸಿದ 'trAPPed' ಎಂಬ ವಿಶೇಷ ವರದಿಗಾಗಿ ಇವರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ವರದಿಯನ್ನು ಅಕ್ಷರ ರೂಪದಲ್ಲಿ ಸುಪರ್ಣಾ ಅವರು ನೀಡಿದ್ದರೆ, ಚಿತ್ರಗಳ ಮೂಲಕ ವಿವರಿಸಿದವರು ಆನಂದ್.

ಭಾರತದ ಒಬ್ಬ ನರರೋಗ ತಜ್ಞೆ ಹೇಗೆ ಸೈಬರ್ ಅಪರಾಧಿಗಳ ಜಾಲಕ್ಕೆ ಸಿಲುಕಿ, ತನ್ನ ಫೋನ್ ಮೂಲಕವೇ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಮಾನಸಿಕ ಹಿಂಸೆ ಮತ್ತು ಹಣಕಾಸಿನ ವಂಚನೆ ಒಳಗಾದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಾಗಿದೆ. ಈ ವರದಿಯನ್ನು ಕೇವಲ ಲೇಖನದ ರೂಪದಲ್ಲಿ ನೀಡದೆ, ಚಿತ್ರಗಳ ಮೂಲಕ ವಿವರಿಸಲಾಗಿದೆ. ಸೈಬರ್ ವಂಚಕರು ಜನರನ್ನು ಹೇಗೆ ಭಯಭೀತರನ್ನಾಗಿ ಮಾಡುತ್ತಾರೆ ಮತ್ತು ಅವರ ಮೇಲೆ ಹೇಗೆ ಮಾನಸಿಕ ನಿಯಂತ್ರಣ ಸಾಧಿಸುತ್ತಾರೆ ನಿರೂಪಿಸಲಾಗಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದಿಂದ ನಿರ್ವಹಿಸಲ್ಪಡುವ ಪುಲಿಟ್ಜರ್ ಪ್ರಶಸ್ತಿಗಳು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಗೆ ನೀಡುವ ಗೌರವವಾಗಿದೆ.

ಆನಂದ್ ಆರ್.ಕೆ ಯಾರು?

ಮುಂಬೈ ಮೂಲದ ಆನಂದ್, ಚಿತ್ರಕಾರ ಮತ್ತು ದೃಶ್ಯ ಕಲಾವಿದ. 2011ರಲ್ಲಿ ಸರ್‌ ಜೆಜೆ ಸ್ಕೂಲ್‌ ಆಫ್‌ ಆರ್ಟ್‌ನಿಂದ ಪದವಿ ಪಡೆದ ಅವರು ಇಮೇಜ್ ಕಾಮಿಕ್ಸ್‌ನ 'ಬ್ಲೂ ಇನ್ ಗ್ರೀನ್' ಎಂಬ ಗ್ರಾಫಿಕ್ ಕಾದಂಬರಿಗಾಗಿ ಜಾನ್ ಪಿಯರ್ಸನ್ ಅವರೊಂದಿಗೆ 2021ರಲ್ಲಿ ಅತ್ಯುತ್ತಮ ವರ್ಣಚಿತ್ರಕಾರ/ಮಲ್ಟಿಮೀಡಿಯಾ ಕಲಾವಿದ ವಿಭಾಗದಲ್ಲಿ 'ಐಸ್ನರ್' ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಹಂಡೇ , ಭಾರತೀಯ ನೌಕಾ ಪಡೆ, ಇಮ್ಯಾಜಿನ್ ಎಫ್‌ಎಕ್ಸ್ ಮ್ಯಾಗಜೀನ್ ಮತ್ತು ಹೆವಿ ಮೆಟಲ್ ಮ್ಯಾಗಜೀನ್ ಸೇರಿದಂತೆ ಹಲವು ಪ್ರತಿಷ್ಟಿತ ಕಂಪನಿಗಳಿಗಾಗಿ ಆನಂದ್‌ ಕೆಲಸ ಮಾಡಿದ್ದಾರೆ.

ಸುಪರ್ಣಾ ಶರ್ಮಾ

ಅಪರಾಧ, ಸಂಘರ್ಷಗಳು, ರಾಷ್ಟ್ರೀಯ ವಿಪತ್ತುಗಳು ಮತ್ತು ಭ್ರಷ್ಟಾಚಾರ ಕುರಿತಾದ ಲೇಖನಗಳನ್ನು ಬರೆಯುವಲ್ಲಿ ಮೂರು ದಶಕಗಳ ಅನುಭವ ಸುಪರ್ಣಾ ಅವರದ್ದು. ಸ್ವತಂತ್ರ ತನಿಖಾ ಪತ್ರಕರ್ತೆ ಮತ್ತು ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ.

ಅಲ್ಲದೆ, ದೆಹಲಿಯ ಆಶ್ರಯತಾಣವೊಂದರಲ್ಲಿ ಮೃತಪಟ್ಟ ಇಬ್ಬರು ಹಿರಿಯ ನಾಗರಿಕರ ಸಾವಿನ ಕುರಿತು 2023ರಲ್ಲಿ ಸುಪರ್ಣಾ ಅವರು ಅಲ್‌ಜಜೀರಾಕ್ಕೆ ಬರೆದ ತನಿಖಾ ವರದಿಯು ವೃದ್ಧರ ಆರೈಕೆಯಲ್ಲಿನ ತೀವ್ರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎನ್ನುವ ಸತ್ಯವನ್ನು ಬಯಲಿಗೆಳೆಯಲು ಅಧಿಕಾರಿಗಳಿಗೆ ನೆರವಾಗಿತ್ತು. ಭಾರತದ ಮಹಿಳಾ ಕುಸ್ತಿಪಟುಗಳ ಮೇಲಿನ ಕಿರುಕುಳ ಪ್ರಕರಣ ಸೇರಿದಂತೆ ಪ್ರಮುಖ ವರದಿಗಳನ್ನು ಇವರು ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries