HEALTH TIPS

ಅಂತಾರಾಷ್ಟ್ರೀಯ ಚಹಾ ದಿನ: ಇತಿಹಾಸ, ಮಹತ್ವ ಮತ್ತು ಭಾರತದ ಚಹಾ ಸಂಸ್ಕೃತಿಯ ವಿಶೇಷತೆ ಇಲ್ಲಿದೆ

ಪ್ರತಿ ವರ್ಷ ಮೇ 21ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನಾಗಿ ಆಚರಿಸಲಾಗುತ್ತದೆ. ನೀರಿನ ನಂತರ ಜಗತ್ತಿನಲ್ಲಿ ಅತ್ಯಧಿಕವಾಗಿ ಸೇವಿಸಲ್ಪಡುವ ಪಾನೀಯವೆಂದರೆ ಅದು ಚಹಾ. ಕೇವಲ ಒಂದು ಪಾನೀಯವಾಗಿಯೇ ಅಲ್ಲದೆ, ಚಹಾ ಹಲವು ದೇಶಗಳ ಸಂಸ್ಕೃತಿ, ಆರ್ಥಿಕತೆ ಮತ್ತು ಸಾಮಾಜಿಕ ಜೀವನದ ಒಂದು ಭಾಗವಾಗಿಯೂ ಗುರುತಿಸಿಕೊಂಡಿದೆ.

ಭಾರತವೂ ವಿಶ್ವದ ಪ್ರಮುಖ ಚಹಾ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಅಸ್ಸಾಂ ಮತ್ತು ಡಾರ್ಜಿಲಿಂಗ್ ಇಂತಹ ಪ್ರದೇಶಗಳು ವಿಶ್ವಪ್ರಸಿದ್ಧ ಚಹಾಗಳಿಗೆ ಹೆಸರಾಗಿವೆ.

ಚಹಾದ ಇತಿಹಾಸ

ಚಹಾದ ಇತಿಹಾಸ ಫ್ರಾರಂಭವಾಗಿದ್ದು ಕ್ರಿ.ಪೂ. 2737ರಷ್ಟು ಹಳೆಯ ಕಾಲದಲ್ಲಿ ಚೀನಾದಿಂದ ಆರಂಭವಾಗಿದೆ ಎಂದು ಹೇಳಲಾಗುತ್ತದೆ. ಚೀನಾದ ರಾಜ ಶೆನ್ ನಾಂಗ್ ಕುದಿಯುತ್ತಿದ್ದ ನೀರಿಗೆ ತಪ್ಪಾಗಿ ಚಹಾ ಎಲೆಗಳು ಬಿದ್ದಾಗ ಮೊದಲ ಬಾರಿಗೆ ಚಹಾ ತಯಾರಾಯಿತು ಎನ್ನುವುದು ಜನಪ್ರಿಯ ಕತೆ. ಬಳಿಕ ಬ್ರಿಟಿಷರು ಭಾರತ ಮತ್ತು ಶ್ರೀಲಂಕಾದಲ್ಲಿ ಚಹಾ ಬೆಳೆಯನ್ನು ಪರಿಚಯಿಸಿ, ದೊಡ್ಡ ಮಟ್ಟದಲ್ಲಿ ತೋಟಗಳನ್ನು ನಿರ್ಮಿಸಿದರು. ಇದೇ ಕಾಲಘಟ್ಟದಲ್ಲಿ ಚಹಾಕ್ಕೆ ಹಾಲು-ಸಕ್ಕರೆ ಬೆರೆಸಿ ಸವಿಯುವ ಹೊಸ ಸಂಸ್ಕೃತಿ ಜಗತ್ತಿನಾದ್ಯಂತ ಜನಪ್ರಿಯವಾಯಿತು.

ಅಂತರಾಷ್ಟ್ರೀಯ ಚಹಾ ದಿನಾಚರಣೆ ಉದ್ದೇಶ?

ಚಹಾ ಬೆಳೆಗಾರರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ರಪ್ತುದಾರರ ಶ್ರಮವನ್ನು ಗೌರವಿಸುವ ಉದ್ದೇಶಕ್ಕಾಗಿಯೇ ಈ ದಿನವನ್ನು ಅಂತರಾಷ್ಟ್ರೀಯ ಚಹಾ ದಿನ ಎಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2019 ಮೇ 21ನ್ನು ಅಧಿಕೃತವಾಗಿ ಅಂತರಾಷ್ಟ್ರೀಯ ಚಹಾ ದಿನ ಘೋಷಿಸಿತು.

ಭಾರತವು ವಿಶ್ವದ ಎರಡನೆ ಅತಿ ದೊಡ್ಡ ಚಹಾ ಉತ್ಪಾದಕ ರಾಷ್ಟ್ರವಾಗಿದೆ. ಇಲ್ಲಿ ಡಾರ್ಜಿಲಿಂಗ್ ಚಹಾ ಮತ್ತು ಆಸ್ಸಾಂ ಚಹಾ ಜಗತ್ತಿನಾದ್ಯಂತ ಅಪಾರವಾದ ಪ್ರಸಿದ್ದಿಯನ್ನು ಪಡೆದಿವೆ. ಭಾರತೀಯರಿಗೆ ಚಹಾ ಒಂದು ಕೇವಲ ಒಂದು ಪಾನೀಯವಲ್ಲ, ಅದು ದಿನನಿತ್ಯ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಮನೆಯಲ್ಲಿ ಇರಲಿ, ಕಚೇರಿಯಲ್ಲೆ ಇರಲಿ ಅಥವಾ ಬೀದಿ ಬದಿಯ ಟೀ ಅಂಗಡಿ ಇರಲಿ ಒಂದು ಕಪ್ ಚಹಾ ಜನರ ನಡುವೆ ಒಂದು ಆತ್ಮಿಯತೆಯನ್ನು ಬೆಳೆಸುತ್ತದೆ.

ಮೇ 21ರ ಮಹತ್ವ

ಭಾರತ, ಶ್ರೀಲಂಕಾ ಮತ್ತು ಚೀನಾ ಸೇರಿದಂತೆ ಹಲವು ಚಹಾ ಉತ್ಪಾದಕ ರಾಷ್ಟ್ರಗಳಲ್ಲಿ ಈ ಸಮಯದಲ್ಲಿ ಚಹಾ ಕೊಯ್ಲು ನಡೆಯುತ್ತದೆ. ಹೀಗಾಗಿ ಚಹಾ ಬೆಳೆಗಾರರು ಮತ್ತು ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ ಮೇ 21ರಂದು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಜನರು ಚಹಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಬಹುತೇಕರು ಮಹಿಳೆಯರು ಎಂಬುದು ವಿಶೇಷ.

ಚಹಾ ಬಗ್ಗೆ ಆಸಕ್ತಿದಾಯಕ ಸಂಗತಿಗಳು

ಭಾರತವು ವಿಶ್ವದ ಪ್ರಮುಖ ಕಪ್ಪು ಚಹಾ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ.

ಡಾರ್ಜಿಲಿಂಗ್ ಚಹಾವನ್ನು "ಚಹಾದ ಶ್ಯಾಂಪೇನ್" ಎಂದು ಕರೆಯಲಾಗುತ್ತದೆ.

ಗ್ರೀನ್ ಟೀ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು ಆರೋಗ್ಯಕ್ಕೆ ಉತ್ತಮ.

ಹರ್ಬಲ್ ಟೀ, ಕ್ಯಾಮೊಮೈಲ್ ಟೀ ಮತ್ತು ಹಿಬಿಸ್ಕಸ್ ಟೀ ಆರೋಗ್ಯ ಲಾಭಗಳಿಗೆ ಪ್ರಸಿದ್ಧ.

ಭಾರತದಲ್ಲಿ ಚಹಾ ದಿನವನ್ನು ಹೇಗೆ ಆಚರಿಸುತ್ತಾರೆ?

ಭಾರತದಲ್ಲಿ ಚಹಾ ರುಚಿ ಪರೀಕ್ಷೆ ಕಾರ್ಯಕ್ರಮಗಳು, ಚಹಾ ತೋಟಗಳ ಪ್ರವಾಸ, ಟೀ ಫೆಸ್ಟಿವಲ್‌ಗಳು ಮತ್ತು ಮನೆಗಳಲ್ಲಿ ವಿವಿಧ ರೀತಿಯ ಚಹಾ ತಯಾರಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ #InternationalTeaDay ಹ್ಯಾಶ್‌ಟ್ಯಾಗ್ ಬಳಸಿ ಚಹಾ ಪ್ರಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಚಹಾದಿಂದ ಆಗುವ ಆರೋಗ್ಯದ ಲಾಭಗಳು

ಗ್ರೀನ್ ಟೀ ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹರ್ಬಲ್ ಟೀ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಒಂದು ಕಪ್ ಚಹಾದ ಹಿಂದೆ ಇರುವ ಶ್ರಮ

ಚಹಾ ಕೇವಲ ಒಂದು ಪಾನೀಯವಲ್ಲ; ಅದು ಜನರನ್ನು ಒಗ್ಗೂಡಿಸುವ ಅದ್ಭುತ ಸಂಸ್ಕೃತಿ. ಇಂದು ನಾವು ಸವಿಯುವ ಪ್ರತಿಯೊಂದು ಕಪ್ ಚಹಾದ ಹಿಂದೆಯೂ ಲಕ್ಷಾಂತರ ತೋಟದ ಕಾರ್ಮಿಕರ ಬೆವರಿನ ಹನಿ ಮತ್ತು ಕಠಿಣ ಶ್ರಮ ಅಡಗಿದೆ. ಅಂತರರಾಷ್ಟ್ರೀಯ ಚಹಾ ದಿನವು ಕೇವಲ ಚಹಾವನ್ನು ಆಚರಿಸುವ ದಿನವಲ್ಲ, ಬದಲಿಗೆ ಆ ಶ್ರಮಜೀವಿಗಳ ಕಷ್ಟವನ್ನು ಗೌರವಿಸುವ ಮತ್ತು ಚಹಾದ ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಇಡೀ ಜಗತ್ತಿಗೆ ನೆನಪಿಸುವ ಮಹತ್ವದ ದಿನವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries