HEALTH TIPS

ನೇಮಂನಲ್ಲಿ ಯುಡಿಎಫ್-ಬಿಜೆಪಿ ಒಳ ಒಪ್ಪಂದದಿಂದಾಗಿ ಸೋಲು: ಶಿವನ್‌ಕುಟ್ಟಿ

 ತಿರುವನಂತಪುರ: ಕೇರಳಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್ ವಿರುದ್ಧ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಪರಾಭವಗೊಂಡಿದ್ದರು. 


ಈ ಕುರಿತು ಪ್ರತಿಕ್ರಿಯಿಸಿದ ಶಿವನ್‌ಕುಟ್ಟಿ, 'ನೇಮಂ ಕ್ಷೇತ್ರದಲ್ಲಿ ಬಿಜೆಪಿ-ಯುಡಿಎಫ್ ನಡುವೆ ಒಳ ಒಪ್ಪಂದ ನಡೆದಿದೆ' ಎಂದು ಆರೋಪಿಸಿದ್ದಾರೆ.

ಶಿವನ್‌ಕುಟ್ಟಿ ಅವರನ್ನು 4,978 ಮತಗಳ ಅಂತರದಿಂದ ಬಿಜೆಪಿಯ ಚಂದ್ರಶೇಖರ್ ಪರಾಭವಗೊಳಿಸಿದ್ದರು. ಚಂದ್ರಶೇಖರ್ 57,192 ಹಾಗೂ ಶಿವನ್‌ಕುಟ್ಟಿ 52,214 ಮತಗಳನ್ನು ಗಳಿಸಿದ್ದರು.

ಇಲ್ಲಿ ಸ್ಪರ್ಧಿಸಿದ ಕಾಂಗ್ರೆಸ್‌ನ ಕೆ.ಎಸ್. ಶಬರೀನಾಥನ್ 27,472 ಮತಗಳನ್ನು ಗಳಿಸಿದ್ದರು.

'ನೇಮಂ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಮದ್ಯ ಖರ್ಚು ಮಾಡಲಾಗಿದೆ' ಎಂದು ಶಿವನ್‌ಕುಟ್ಟಿ ದೂರಿದ್ದಾರೆ.

'ಎಲ್‌ಡಿಎಫ್ ಲೆಕ್ಕಾಚಾರದ ಪ್ರಕಾರ ನೇಮಂನಲ್ಲಿ ನನ್ನ ಸೋಲಿಗೆ ಯಾವುದೇ ಅವಕಾಶ ಇರಲಿಲ್ಲ. ಆದರೆ ಬಿಜೆಪಿ-ಯುಡಿಎಫ್ ಒಪ್ಪಂದದಿಂದಾಗಿ ಸೋಲು ಎದುರಾಯಿತು' ಎಂದಿದ್ದಾರೆ.

'2021ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ನಿಂದ 7 ಸಾವಿರಕ್ಕೂ ಅಧಿಕ ಮತಗಳು ಸೋರಿಕೆಯಾಗಿದ್ದು, ಅದು ಬಿಜೆಪಿ ಪಾಳಯಕ್ಕೆ ಹೋಗಿದೆ' ಎಂದು ಶಿವನ್‌ಕುಟ್ಟಿ ಆರೋಪಿಸಿದ್ದಾರೆ.

2016ರಲ್ಲಿ ನೇಮಂ ಕ್ಷೇತ್ರದಿಂದ ಬಿಜೆಪಿಯ ಒ. ರಾಜಗೋಪಾಲ್ ಐತಿಹಾಸಿಕ ಗೆಲುವು ದಾಖಲಿಸಿದ್ದರು. ಆದರೆ 2021ರಲ್ಲಿ ಬಿಜೆಪಿ ಸೋಲು ಕಂಡಿತ್ತು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries