ಕಾಸರಗೋಡು: ತ್ಯಾಗ, ಸಮರ್ಪಣೆ ಮತ್ತು ನಂಬಿಕೆಯ ಸ್ಮರಣೆಯೊಂದಿಗೆ ಗುರುವಾರ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಮರು ಆಚರಿಸಿದರು. ಪ್ರವಾದಿ ಇಬ್ರಾಹಿಂ ಮತ್ತು ಅವರ ಕುಟುಂಬದ ಅಪ್ರತಿಮ ತ್ಯಾಗವನ್ನು ಸ್ಮರಿಸುವುದರ ಜತೆಗೆ ಪ್ರೀತಿ ಮತ್ತು ಸಂತೋಷವನ್ನು ಹಂಚಿಕೊಳ್ಳಲಾಯಿತು.
ಕಾಸರಗೋಡು ತಳಂಗರೆ ಮಾಲಿಕ್‍ದೀನಾರ್ ಜುಮಾ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸೇರಿದಂತೆ ಜಿಲ್ಲಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ನಗರದ ವಿವಿಧ ಈದ್ಗಾಗಳಲ್ಲೂ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು.
ಕಾಸರಗೋಡು ಕೆ.ಎನ್.ಎಂ ಟೌನ್ ಸಲಫಿ ಈದ್ಗಾದಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆಗೆ ವಿದ್ವಾಂಸ ಯೂಸುಫ್ ಮೌಲವಿ ಪ್ರಾರ್ಥನೆ ಮತ್ತು ಈದ್ ಕುತುಬ್‍ಗೆ ನೇತೃತ್ವ ನೀಡಿದರು.
ಚಿತ್ರ ಮಾಹಿತಿ ತಳಂಗರೆ ಮಾಲಿಕ್‍ದೀನಾರ್ ಜುಮಾ ಮಸೀದಿಯಲ್ಲಿ ಈದ್ ಪ್ರಾರ್ಥನೆ ನಡೆಯಿತು.
ಕಾಸರಗೋಡು ಕೆ.ಎನ್.ಎಂ ಟೌನ್ ಸಲಫಿ ಈದ್ಗಾದಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆಗೆ ವಿದ್ವಾಂಸ ಯೂಸುಫ್ ಮೌಲವಿ ನೇತೃತ್ವ ನೀಡಿದರು.

