ಕಾಸರಗೋಡು: ಎರ್ನಾಕುಳಂ ಸಮೀಪದ ಅಂಗಮಾಲಿಯಲ್ಲಿ ಕಾರುಮತ್ತು ಬೈಕ್ ಡಿಕ್ಕಿಯಾಗಿ ಕಾಸರಗೋಡು ನೆಲ್ಲಿಕಟ್ಟೆ ಬಲಿಯ ನಿವಾಸಿ ಡಿ. ಮುಹಮ್ಮದ್ ಅವರ ಪುತ್ರಿ ಇಷಾನಾ ಇಸ್ಮತ್ (21)ಮೃತಪಟ್ಟಿದ್ದಾರೆ. ಈಕೆ ಸ್ನೇಹಿತನಾದ ಕಾಸರಗೋಡು ನಿವಾಸಿ ಸರ್ಫಾತ್ ಎಂಬಾತನ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತವುಂಟಾಗಿದೆ. ಬೈಕ್ ಚಲಾಯಿಸಿದ ಸಫ್ವಾನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿಯಾದ ಇಷಾನಾ ಇಸ್ಮತ್ ಉತ್ತಮ ಉದ್ಯೋಗ ಅರಸಿ ಎರ್ನಾಕುಳಂಗೆ ತೆರಳಿದ್ದರೆನ್ನಲಾಗಿದೆ.
ಬೈಕ್ ಅಂಗಮಾಲಿಗೆ ಸಮೀಪದ ಅತ್ತಾಣಿ-ಏರ್‍ಪೆÇೀರ್ಟ್ ವಿ.ಐ.ಪಿ ತಿರುವು ರಸ್ತೆ ಮೂಲಕ ಹಾದು ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇಷಾನಾ ಇಸ್ಮತ್‍ರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.


