ಉಪ್ಪಳ: ಮಹಿಳಾ ಮತ್ತು ಶಿಶು ಕ್ಷೇಮ ಅಭಿವೃದ್ಧಿ ಇಲಾಖೆ ಮಂಜೇಶ್ವರದ ಐಸಿಡಿಎಸ್‍ನ ನೇತೃತ್ವದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿಯ ಮಕ್ಕಳಿಗಾಗಿ ಆಯೋಜಿಸಿದ ವೇನಲ್ ವೈಬ್ ಬೇಸಿಗೆ ಶಿಬಿರವು ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ಉದ್ಘಾಟಿಸಿದರು. ಚೈಲ್ಡ್ ಡೆವಲಪ್‍ಮೆಂಟ್ ಪ್ರೊಜೆಕ್ಟ್ ಆಫೀಸರ್ ಪ್ರೀತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉಪಸ್ಥಿತರಿದ್ದರು. ಮಂಗಲ್ಪಾಡಿ ಪಂಚಾಯತಿನ ಅಂಗನವಾಡಿ ಶಿಕ್ಷಕಿಯರು ಕೌನ್ಸಿಲರ್ ಮೊದಲಾದವರು ಭಾಗವಹಿಸಿದರು. ಐಸಿಡಿಎಸ್ ಮೇಲ್ವಿಚಾರಕಿ ಜ್ಯೋತಿ ಅವರ ಉಸ್ತುವಾರಿಯಲ್ಲಿ ಬೇಸಿಗೆ ಶಿಬಿರ ನಡೆಯಿತು.

.jpg)
