HEALTH TIPS

ಇಂದು ಪಂಚ ರಾಜ್ಯ ಚುನಾವಣಾ ಫಲಿತಾಂಶ: ಪಶ್ಚಿಮ ಬಂಗಾಳದ ವಿವಿಧೆಡೆ ಕಟ್ಟೆಚ್ಚರ

ನವದೆಹಲಿ: ದೇಶದ ಜನತೆಯ ಗಮನಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆ ಇಂದು ಸೋಮವಾರ ನಡೆಯಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ ಬೆಳಗ್ಗೆ 8:00 ಗಂಟೆಗೆ ಏಕಕಾಲದಲ್ಲಿ ಆರಂಭವಾಗಲಿದ್ದು, ಒಟ್ಟು 824 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ಮೊದಲಿಗೆ ಅಂಚೆ ಮತಗಳ ಏಣಿಕೆ ನಡೆಯಲಿದ್ದು, ಬಳಿಕ ಹಲವಾರು ಸುತ್ತುಗಳಲ್ಲಿ ಇವಿಎಂ ಮತ ಏಣಿಕೆ ನಡೆಯಲಿದೆ.

294 ಕ್ಷೇತ್ರಗಳನ್ನೊಳಗೊಂಡ ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿರುವುದಾಗಿ ಚುನಾವಣಾ ಸಮೀಕ್ಷೆಗಳು ತಿಳಿಸಿವೆ. ಪ್ರತಿಷ್ಠೆಯ ಕಣಗಳಾಗಿರುವ ಬಬಾನಿಪುರ,ನಂದಿಗ್ರಾಮ ಹಾಗೂ ಭಾನಗರದಲ್ಲಿ ಮತಏಣಿಕೆಯ ಸಂದರ್ಭದಲ್ಲಿ ಆವುದೇ ಅಹಿತರ ಘಟನೆಗಳು ಸಂಭವಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇತ್ತ ದಕ್ಷಿಣದ ರಾಜ್ಯವಾದ ತಮಿಳುನಾಡಿನಲ್ಲಿ ಮತಏಣಿಕೆಗೆ ಅಡ್ಡಿಪಡಿಸಲು ಸಂಚು ನಡೆಯುತ್ತಿದೆಯೆಂದು ಆಡಳಿತ ಪಕ್ಷವಾದ ಡಿಎಂಕೆ ಆಪಾದಿಸಿದೆ ಹಾಗೂ ರಾಜ್ಯದಾದ್ಯಂತ ಭದ್ರತಾ ಏರ್ಪಾಡುಗಳನ್ನು ಬಿಗಿಗೊಳಿಸಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳು ಮತಏಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆಯೆಂದು ಆಪಾದಿಸಿದೆ.

ಈ ನಡುವೆ ಚುನಾವಣಾ ಆಯೋಗವು ಹೇಳಿಕೆಯೊಂದನ್ನು ನೀಡಿ ತಮಿಳುನಾಡಿನ ಮತಏಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಗಳಿಗಾಗಿ ನಿಯೋಜಿಸಲಾಗಿದೆ.ಚೆನ್ನೈ ನಗರದಲ್ಲೇ ಸುಮಾರು 20 ಸಾವಿರ ಮಂದಿ ಭದ್ರತಾ ಸಿಬ್ಬಂದಿ ನಿಯೋಜಿಸಲ್ಪಟ್ಟಿದ್ದಾರೆ.

ಅಸ್ಸಾಂನಲ್ಲಿ ಮತಏಣಿಕೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಡಿದೆ. 59 ಮಹಿಳೆಯರು ಸೇರಿದಂತೆ 722 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ ಎಲ್ಲಾ 35 ಜಿಲ್ಲೆಗಳ 126 ಕ್ಷೇತ್ರಗಳ ಮತಏಣಿಕೆ 40 ಕೇಂದ್ರಗಳಲ್ಲಿ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ. ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಿಟ್ಟುಕೊಂಡಿದ್ದರೆ, ಕಾಂಗ್ರೆಸ್ ಒಂದು ದಶಕದ ಬಳಿಕ ಅಧಿಕಾರಕ್ಕೇರುವ ಹಂಬಲದಲ್ಲಿದೆ.

140 ವಿಧಾನಸಭಾ ಕ್ಷೇತ್ರಗಳ ಮತಏಣಿಕೆ ರಾಜ್ಯಾದ್ಯಂತದ 43 ಸ್ಥಳಗಳಲ್ಲಿ ನಡೆಯಲಿದೆ. ಒಟ್ಟು 883 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಡಳಿತಾರೂಢ ಎಡಪ್ರಜಾತಾಂತ್ರಿಕ ರಂಗ (ಎಲ್‌ಡಿಎಫ್) ಹಾಗೂ ಕಾಂಗ್ರೆಸ್ ನೇತೃತ್ವದ ಐಕ್ಯಪ್ರಜಾತಾಂತ್ರಿಕ ರಂಗ (ಯುಡಿಎಫ್) ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. 2016ರಿಂದೀಚೆಗೆ ಕೇರಳದಲ್ಲಿ ಅಧಿಕಾರದಿಂದ ಹೊರಗುಳಿದಿರುವ ಯುಡಿಎಫ್‌ಗೆ ಇದೊಂದು ನಿರ್ಣಾಯಕ ಚುನಾವಣೆಯಾಗಿದೆ. ಇದೇ ರೀತಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿದೆ.

ಕೇಂದ್ರಾಡಳಿತ ಪುದುಚೇರಿಯ ಎಲ್ಲಾ 30 ಕ್ಷೇತ್ರಗಳ ಚುನಾವಣಾ ಫಲಿತಾಂಶ ಮತಏಣಿಕೆ ಆರಂಭಗೊಂಡ ಕೆಲವೇ ತಾಸುಗಳೊಳಗೆ ಲಭ್ಯವಾಗುವ ನಿರೀಕ್ಷೆಯಿದೆ. ಅಖಿಲಭಾರತ ಎನ್‌ಆರ್ ಕಾಂಗ್ರೆಸ್ (ಎಐಎನ್‌ಆರ್‌ಸಿ) ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಗುರಿಯಿರಿಸಿದ್ದರೆ, ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಪ್ರಬಲ ಪೈಪೋಟಿ ನೀಡಿದೆ. ಎಪ್ರಿಲ್ 9ರಂದು ಒಂದೇ ಹಂತದಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 89 ಶೇಕಡ ಮತದಾನವಾಗಿತ್ತು.

ಪ.ಬಂಗಾಳದ 11 ಜಿಲ್ಲೆಗಳಲ್ಲಿ ಗರಿಷ್ಠ ಕಟ್ಟೆಚ್ಚರ

ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಮವಾರ ಮತಏಣಿಕೆಗೆ ಸಿದ್ಧತೆ ಪೂರ್ಣಗೊಂಡಿರುವಂತೆಯೇ, ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ಉನ್ನತ ಮಟ್ಟದ ಭದ್ರತಾ ಪರಾರ್ಶನಾ ಸಭೆ ನಡೆಸಿದ್ದು, ಆ ರಾಜ್ಯದ 11 ಜಿಲ್ಲೆಗಳಲ್ಲಿ ಚುನಾವಣಾ ಹಿಂಸಾಚಾರ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅವನ್ನು ಅತ್ಯಧಿಕ ಸೂಕ್ಷ್ಮಸಂವೇದಿ ಜಿಲ್ಲೆಗಳೆಂದು ಗುರುತಿಸಿದೆ.

ಮುರ್ಷಿದಾಬಾದ್, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಕೂಚ್ ಬೆಹಾರ್, ಮಾಲ್ಡಾ, ನಾಡಿಯಾ, ಬಿರ್‌ಭೂಮ್, ಪಶ್ಚಿಮ ಮೇದಿನಿಪುರ,ಜಾರ್‌ಗ್ರಾಮ ಮತ್ತು ಕೈಗಾರಿಕಾ ವಲಯಗಳಾದ ಹೌರಾ ಹಾಗೂ ಹೂಗ್ಲಿ ಸೂಕ್ಷ್ಮ ಸಂವೇದಿ ಜಿಲ್ಲೆಗಳೆಂದು ಗುರುತಿಸಲಾಗಿದೆ.

7 ಉಪಚುನಾವಣೆಗಳ ಫಲಿತಾಂಶ

ದೇಶಾದ್ಯಂತ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಮಹಾರಾಷ್ಟ್ರ (ಬಾರಾಮತಿ, ರಾಹುರಿ), ಕರ್ನಾಟಕದ ತಲಾ 2 (ದಾವಣಗೆರೆ ದಕ್ಷಿಣ, ಬಾಗಲಕೋಟೆ), ಗುಜರಾತ್ (ಉಮ್ರೇತ್), ತ್ರಿಪುರಾ(ಧರ್ಮನಗರ), ನಾಗಲ್ಯಾಂಡ್ (ಕೊರಿಡಾಂಗ್)ನ ತಲಾ 1 ಕ್ಷೇತ್ರಗಳಿಗೆ ಎಪ್ರಿಲ್ 9ರಂದು ಮತದಾನ ನಡೆದಿತ್ತು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕಾಗಿ ಬಾರಾಮತಿ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries