HEALTH TIPS

ವಾಂತಿ ಎಂದು ವಿಮಾನದ ಎಮರ್ಜೆನ್ಸಿ ಬಾಗಿಲನ್ನೇ ತೆರೆದು‌ ಜಿಗಿಯಲು ಯತ್ನಿಸಿದ ಭೂಪ!

ಚೆನ್ನ್ಯೆ: ಶಾರ್ಜಾದಿಂದ ಚೆನ್ನೈಗೆ ಬರುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿ ಭಾನುವಾರ ವಿಲಕ್ಷಣ ಘಟನೆಯೊಂದು ನಡೆದಿದೆ.

ಪ್ರಯಾಣಿಕನೊಬ್ಬ ವಾಂತಿ ಬಂದಿದೆ ಎಂದು ವಿಮಾನದ ತುರ್ತು ನಿರ್ಗಮನದ ದ್ವಾರ ತೆರೆದು ಅಲ್ಲಿಂದ ಜಿಗಿಯಲು‌ ಯತ್ನಿಸಿದ್ದಾನೆ.

ಈ ಘಟನೆ ನಡೆಯುವಾಗ ವಿಮಾನ ರನ್ ವೇ ಬಿಟ್ಟು ಟ್ಯಾಕ್ಸಿ ವೇ ಮಾರ್ಗದಲ್ಲಿ ಪಾರ್ಕಿಂಗ್ ಆಗುತ್ತಿತ್ತು.

ಆಗ ಮಧ್ಯವಯಸ್ಕ ವ್ಯಕ್ತಿ ವಿಲಕ್ಷಣವಾಗಿ ವರ್ತಿಸಿ ಉಳಿದ ಪ್ರಯಾಣಿಕರು ಗಾಬರಿ ಆಗುವಂತೆ ಮಾಡಿದ್ದ. ತಕ್ಷಣವೇ ಪೈಲಟ್, ನಿಯಂತ್ರಣ ಪಡೆದು ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಸದ್ಯ ಆಟಾಟೋಪ ಪ್ರದರ್ಶನ ಮಾಡಿದ ವ್ಯಕ್ತಿ ಪೊಲೀಸ್ ಅತಿಥಿಯಾಗಿದ್ದಾನೆ. ವಿಮಾನದಲ್ಲಿ 231 ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಪ್ರಯಾಣಿಕನನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಅವನ ಮಾನಸಿಕ ಸ್ಥಿತಿಯನ್ನು ಸಹ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಟೈಮ್ಸ್ ನೌ ವಾಹಿನಿ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries