HEALTH TIPS

ಮಕ್ಕಳ ಜೊತೆ ಮಕ್ಕಳಾದ ಪ್ರಧಾನಿ ಮೋದಿ, ಕೇಂದ್ರ ಸಚಿವ ರಾಮ್ ಮೋಹನ್ ಕುಟುಂಬ ಭೇಟಿ ಸರ್ಪ್ರೈಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಜೊತೆ ಹರಟೆ ಹೊಡೆದ, ಕಾಲ ಕಳೆದ ಹಲವು ಘಟನೆಗಳಿವೆ. ಈ ಬಾರಿ ಕೊಂಚ ವಿಶೇಷವಿದೆ. ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ಕುಟುಂಬದ ಭೇಟಿ ವೇಳೆ ಮೋದಿ ಕೆಲ ಹೊತ್ತು ಸಚಿವರ ಇಬ್ಬರು ಮಕ್ಕಳ ಜೊತೆ ಕೆಲ ಹೊತ್ತು ಕಳೆದ ಚಿತ್ರಗಳು ಭಾರಿ ಸದ್ದು ಮಾಡುತ್ತಿದೆ.

ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ವಿಶೇಷ ಅಂದರೆ ರಾಮ್ ಮೋಹನ್ ನಾಯ್ಡು ಪೋಷಕರು, ಪತ್ನಿ, ಮಕ್ಕಳು ಸೇರಿದಂತೆ ಇಡೀ ಕುಟುಂಬ ಮೋದಿ ಭೇಟಿಯಾಗಿದೆ. ವಿಶೇಷ ಕ್ಷಣಗಳ ಫೋಟೋಗಳು ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಪೈಕಿ ಕೇಂದ್ರ ಸಚಿವ ಮಕ್ಕಳ ಜೊತೆಗಿನ ಮೋದಿ ಫೋಟೋ ಭಾರಿ ವೈರಲ್ ಆಗಿದೆ.

ರಾಮ್ ಮೋಹನ್ ನಾಯ್ಡು ಮಗಳು ಹಾಗೂ ಮಗ ಇಬ್ಬರ ಜೊತೆ ಮೋದಿ ಕೆಲ ಹೊತ್ತು ಕಳೆದಿದ್ದಾರೆ. ಪ್ರಧಾನಿ ಕಚೇರಿಯಲ್ಲಿ ತಮ್ಮ ಕೆಲಸ ನಡುವೆ ಮೋದಿ, ಸಚಿವರ ಮಗನ ಟೇಬಲ್ ಮೇಲೆ ಕೂರಿಸಿಕೊಂಡು ಮಾತನಾಡಿದ್ದಾರೆ. ಈ ಫೋಟೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತ ರಾಮ್ ಮೋಹನ್ ನಾಯ್ಡು ಮಗಳಿಗೆ ಶುಭಕೋರಿ ಸಹಿ ಹಾಕಿ ಪುಸ್ತಕವನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಕೇಂದ್ರ ಸಚಿವ ಇಬ್ಬರು ಮಕ್ಕಳ ಪ್ರಧಾನಿ ಕಚೇರಿಯಲ್ಲಿ ಕೆಲ ಹೊತ್ತು ಕಳೆದಿದ್ದಾರೆ. ಮಕ್ಕಳ ಜೊತೆ ನರೇಂದ್ರ ಮೋದಿ ಮಕ್ಕಳಾಗಿ ಸಮಯ ಕಳೆದಿದ್ದಾರೆ.

ವಿಶೇಷ ಅಂದರೆ ಈ ಸಂಭ್ರಮದ ಘಟನೆ ಕುರಿತು ಮೋದಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ನಿನ್ನೆ ಯುವ ಇಬ್ಬರು ಗೆಳೆಯರು ಸೇವಾ ತೀರ್ಥ ಕಚೇರಿಗೆ ಆಗಮಿಸಿದ್ದರು ಎಂದು ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪುಟಾಣಿಗಳನ್ನು ಯಂಗ್ ಫ್ರೆಂಡ್ಸ್ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯನ್ನು ತಮ್ಮ ಇಡೀ ಕುಟುಂಬ ಭೇಟಿಯಾಗಿ ಮಾತುಕತೆ ನಡೆಸಿದ ಕುರಿತು ರಾಮ್ ಮೋಹನ್ ನಾಯ್ಡು ಸಂತಸ ಹಂಚಿಕೊಂಡಿದ್ದಾರೆ. ಈ ವೇಳೆ ಮೋದಿಗೆ ತನ್ನ ಕಾಯಿ ಗಿಡ ಉಡುಗೊರೆಯಾಗಿ ನೀಡಿದ್ದಾರೆ ಎಂದಿದ್ದಾರೆ. ಮೋದಿ ಭೇಟಿ, ಅಶೀರ್ವಾದ ಅತೀವ ಸಂತಸ ನೀಡಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries