HEALTH TIPS

ಶ್ರೀಸ್ಕಂದ ಒಡ್ಡೋಲಗ ಯಕ್ಷಗಾನ ಉತ್ಸವ ಸಂಪನ್ನ

 ಕಾಸರಗೋಡು: ಯಕ್ಷಗಾನದಲ್ಲಿಯುವ ಪ್ರತಿಭೆಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆ ಶ್ರೀಸ್ಕಂದ ಯಕ್ಷಗಾನ ಕೇಂದ್ರ ಪಾಯಿಚ್ಚಾಲು ನೇತೃತ್ವದಲ್ಲಿ ಹಮ್ಮಿಕೊಂಡ ಶ್ರೀಸ್ಕಂದ ಒಡ್ಡೋಲಗ ಎಂಬ ಯಕ್ಷಗಾನ ಉತ್ಸವ ಶ್ಲಾಘನೀಯ. ಆಯ್ದ ಐದು ಮಕ್ಕಳ ತಂಡಗಳಿಂದ ಅದ್ಭುತ ಪ್ರದರ್ಶನ ನಡೆದಿದೆ. ಅದರಲ್ಲೂ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ 'ಎ' ಗ್ರೇಡ್ ಪಡೆದ ಕಲ್ಲಿಕೋಟೆ ಮತ್ತು ಕಣ್ಣೂರಿನ ತಂಡಗಳಿಂದ ಅತ್ಯುತ್ತಮ ಪ್ರದರ್ಶನವಾಗಿದೆ. ಒಟ್ಟಿನಲ್ಲಿ ಯಕ್ಷಗಾನದಲ್ಲಿ ಇದೊಂದು ಮಹತ್ತರ ಸಾಧನೆಯಾಗಿದೆ ಎಂದು ಶಿವಮಂಗಲ ಕ್ಷೇತ್ರದ ಪ್ರಧಾನ ಅರ್ಚಕ ನಾಗೇಂದ್ರ ಭಟ್ ಅಭಿಪ್ರಾಯಪಟ್ಟರು.  


ಅವರು  ಶ್ರೀಸ್ಕಂದ ಒಡ್ಡೋಲಗದ ಸಮಾರೋಪ ಸಮಾರಂಭದವನ್ನು ಉದ್ಘಾಟಿಸಿ ಮಾತನಾಡಿದರು. 

ಕೂಡ್ಲು ಶಾಲೆಯ ವ್ಯವಸ್ಥಾಪಕ ಕೆ.ಜಿ. ಶ್ಯಾನುಭೋಗ್, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವೇಣುಗೋಪಾಲ, ಮಾಧ್ಯಮ ಕಾರ್ಯಕರ್ತ ರಂಜಿತ್ ಮನ್ನಿಪ್ಪಾಡಿ ಶುಭಹಾರೈಸಿದರು. ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲವು ವೈಯಕ್ತಿಕ ಬಹುಮಾನಗಳನ್ನು ಘೋಷಿಸಲಾಯಿತು. ಅದರಂತೆ ಶಾಲಾ ತಂಡದಲ್ಲಿ ಉತ್ತಮ ಪುಂಡುವೇಷ ಸುಧನ್ವ ಪಾತ್ರಧಾರಿ ಹ್ರದ್ಯ ಸಿ ಪಿ, ಉತ್ತಮ ಸ್ತ್ರೀ ವೇಷ ಪ್ರಭಾವತಿ ಪಾತ್ರಧಾರಿ ನೈನಿಕಾ ಕೆ ಪಿ,  ಉತ್ತಮ ಬಣ್ಣದ  ವೇಷ ಅನುಸಾಲ್ವ ಪಾತ್ರಧಾರಿ ಡಿಯೋನಾ ಲಿಯೋ ಡೌಗ್ಲಸ್ ಎಲ್ಲವೂ ಕಲ್ಲಿಕೋಟೆ ಜಿಲ್ಲೆಯ ಪ್ರೊವಿಡೆನ್ಸ್ ಹೈಯರ್ ಸೆಕಂಡರಿ ಶಾಲೆ ಪ್ರದರ್ಶಿಸಿದ ಸುಧನ್ವಾರ್ಜುನ ಕಾಳಗ ಪ್ರಸಂಗ, ಉತ್ತಮ ಕಿರೀಟವೇಷ ಕಣ್ಣೂರಿನ ಸೈಂಟ್ ತೇರೇಸಾಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕಂಡರಿ ಶಾಲೆಯ ತರಣಿಸೇನ ಕಾಳಗದ ರಾಮ ಪಾತ್ರಧಾರಿ ಐತೀಯ ಎಲ್ ಟಿ ಇವರು ಪಡಕೊಂಡರು. 


ಹಿರಿಯರ ವಿಭಾಗದಲ್ಲಿ ಉತ್ತಮ ಪುಂಡುವೇಷ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ನರಕಾಸುರ ಮೋಕ್ಷದ ಕೃಷ್ಣ ಪಾತ್ರಧಾರಿ ಪ್ರೀತಿ ಕಲ್ಲೂರಾಯ, ಉತ್ತಮ ಸ್ತ್ರೀ ವೇಷ ಅದೇ ಪ್ರಸಂಗದ ಸತ್ಯಭಾಮೆ ಪಾತ್ರಧಾರಿ ಭಾಗ್ಯಶ್ರೀ, ಉತ್ತಮ ಬಣ್ಣದವೇಷ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ವೇದೋದ್ಧರಣದ ತಮಾಸುರ ಪಾತ್ರಧಾರಿ ಅರ್ಜುನ್ ಕೂಡ್ಲು, ಉತ್ತಮ ಕಿರೀಟ ವೇಷ ಅದೇ ಪ್ರಸಂಗದ ದೇವೇಂದ್ರ ಪಾತ್ರಧಾರಿ ಶ್ರೀವತ್ಸ ಆಯ್ಕೆಯಾದರು. ಅವರಿಗೆ ಪತ್ಯೇಕ ಹಾಗು ಇತರ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನಗಳನ್ನು ನೀಡಲಾಯಿತು. ಜೊತೆ ಕಾರ್ಯದರ್ಶಿ ಲಾವಣ್ಯ ಭುವನೇಶ್ ಸ್ವಾಗತಿಸಿ, ಮುರಳೀಧರ ಶೆಟ್ಟಿ ವಂದಿಸಿದರು. ಹರ್ಷಕುಮಾರ್ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಗುರುಗಳಾದ ರಂಜಿತ್ ಗೋಳಿಯಡ್ಕ ನೇತೃತ್ವ ವಹಿಸಿದರು. ಶ್ರೀದುರ್ಗಾಂಬ ಯಕ್ಷಗಾನ ವೇಷಭೂಷಣ ಗೋಳಿಯಡ್ಕ, ಮಲ್ಲ ಇವರು ವೇಷಭೂಷಣದಲ್ಲಿ ಸಹಕರಿಸಿದರು. ಅರ್ಪಿತ್ ಕೂಡ್ಲು, ಆಕಾಶ್ ಕೂಡ್ಲು, ಅರ್ಜುನ್ ಕೂಡ್ಲು, ಸುಜನ್, ಪ್ರವೀಣ, ಕುತ್ಯಾಳ ನವಜೀವನ ಸಮಿತಿ, ಹಾಗು ಕೇಂದ್ರದ ಮಕ್ಕಳ ರಕ್ಷಕರು ಸಹಕರಿಸಿದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries