HEALTH TIPS

ಮಿತ್ರಕಲಾ ವೃಂದದ ಸುವರ್ಣ ಸಂಭ್ರಮ-ಬಹುಭಾಷಾ ಕವಿ ಸಂಗಮ

ಮಧೂರು: ಮಧೂರಿನ ಮಿತ್ರಕಲಾ ವೃಂದದ ಸುವರ್ಣ ಸಂಭ್ರಮದ ಅಂಗವಾಗಿ ಬಹುಭಾಷಾ ಕವಿ ಸಂಗಮ ಶನಿವಾರ ಮಧೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ಸಾಹಿತಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅರಮನೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಕನ್ನಡ ಲೇಖಕರ ಸಂಘದ ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ಶುಭಾಶಂಸನೆಗೈದರು. ಮಿತ್ರಕಲಾ ವೃಂದದ ಅಧ್ಯಕ್ಷ ಚಂದ್ರಗೋಪಾಲ ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಆಶಯ ನುಡಿಗಳನ್ನಾಡಿದರು. ಸುವರ್ಣ ಮಹೋತ್ಸವ ಸಮಿತಿ ಗೌರವ ಸಲಹೆಗಾರ, ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಧುಕರ ಕೆ.ಗಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಸುಜಿತ್ ಕೆ.ಸಿ. ವಂದಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. 


ಬಳಿಕ ವಿ.ಬಿ.ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿ ಸಂಗಮದಲ್ಲಿ ವೆಂಕಟ್ ಭಟ್ ಎಡನೀರು, ಪ್ರಮೀಳಾ ಚುಳ್ಳಿಕ್ಕಾನ, ವಿಜಯ ಕಾನ, ಜ್ಯೋತ್ಸ್ನಾ ಕಡಂದೇಲು, ಸುಭಾಶ್ ಪೆರ್ಲ, ಪ್ರೇಮಚಂದ್ರನ್ ಚೊಂಬಾಲ, ನಿರ್ಮಲ ಶೇಷಪ್ಪ ಖಂಡಿಗೆ, ಶಶಿಕಲಾ ಕುಂಬಳೆ, ಹರೀಶ್ ಜಿ.ನಾಯಕ್, ಆನಂದಕೃಷ್ಣನ್ ಎಡಚ್ಚೇರಿ, ಹರ್ಷಿತ ಪೆರ್ಲ, ಸುಮನ ಕರಿಂಬಿಲ, ಧನ್ಯಶ್ರೀ ಸರಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ವಿರಾಜ ಅಡೂರು, ವಿಜಯರಾಜ ಪುಣಿಚಿತ್ತಾಯ, ರವೀಂದ್ರನ್ ಪಾಡಿ, ಶ್ರೀಹರಿ ಭಟ್ ಪೆಲ್ತಾಜೆ, ಸತ್ಯಶಂಕರ ಅನಂತಪುರ, ಸುಂದರ ಬಾರಡ್ಕ, ಪ್ರಭಾವತಿ ಕೆದಿಲಾಯ, ಶರಣ್ಯ ನಾರಾಯಣನ್, ಸ್ನೇಹಲತಾ ದಿವಾಕರ್, ವನಜಾಕ್ಷಿ ಚೆಂಬ್ರಕಾನ, ಚಂದ್ರಿಕಾ ಶೆಣೈ ಮುಳ್ಳೇರಿಯ, ಚಂದ್ರಕಲಾ ನೀರಾಳ, ಅಶ್ವಿನಿ ಚಂದ್ರಶೇಖರ ಕೊಲ್ಯ, ಪುರುಷೋತ್ತಮ ಭಟ್.ಕೆ., ಅವನಿ ಕರಿಂಬಿಲ, ಮೋಹನದಾಸ ಅನ್ನೆಪಲ್ಲಡ್ಕ ವಿವಿಧ ಭಾಷೆಗಳ ಕವನ ವಾಚಿಸಿದರು. 

ದಿವ್ಯಾ ಗಟ್ಟಿ ಪರಕ್ಕಿಲ ಹಾಗೂ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನಿರ್ವಹಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries