HEALTH TIPS

ಬೈಕ್-ಸ್ಕೂಟರ್ ಢಿಕ್ಕಿ ಹೊಡೆದು ಪ್ಲಸ್‍ಟು ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಉಳಿಯತ್ತಡ್ಕ-ಚೌಕಿ ರಸ್ತೆಯ  ಆಜಾದ್‍ನಗರದಲ್ಲಿ  ಸ್ಕೂಟರ್ ಹಾಗೂ ಬೈಕ್  ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ  ಪ್ಲಸ್‍ಟು ವಿದ್ಯಾರ್ಥಿ  ಮೃತಪಟ್ಟ ದಾರುಣ ಘಟನೆ ನಡೆದಿದೆ.


ನೆಕ್ರಾಜೆ ನಿವಾಸಿಯೂ, ಚೌಕಿ ಆಜಾದ್‍ನಗರದಲ್ಲಿ ವಾಸಿಸುವ ಗಲ್ಫ್ ಉದ್ಯೋಗಿ ರಫೀಕ್ ಎಂಬವರ ಪುತ್ರ ಶಹಬಾಸ್ ಅಸರ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ.  ಈತನ ಜೊತೆಗಿದ್ದ ಇನ್ನೋರ್ವ ಹಾಗೂ ಬೈಕ್‍ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಇವರನ್ನು  ಮಂಗಳೂರು ಹಾಗೂ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ರಾತ್ರಿ 10.45ರ ವೇಳೆ ಅಪಘಾತ ಸಂಭವಿ ಸಿದೆ. ರಫೀಕ್-ಅಲ್ಫೀನ ದಂಪತಿಯ ಏಕೈಕ ಪುತ್ರನಾದ ಶಹಬಾಸ್ ಅಸರ್  ವಿದ್ಯಾನಗರದ ಉದಯಗಿರಿ ಕೇಂ ದ್ರೀಯ ವಿದ್ಯಾಲ ಯದ ವಿದ್ಯಾರ್ಥಿ ಯಾಗಿದ್ದಾನೆ. ಪ್ಲಸ್‍ವನ್ ಶಿಕ್ಷಣ ಪೂರ್ತಿಗೊಳಿಸಿದ ಶಹಬಾಸ್ ಅಸರ್ ಪ್ಲಸ್‍ಟುಗೆ ತೆರಳುವ ಸಿದ್ಧತೆಯಲ್ಲಿರುವಾಗಲೇ ಅಪಘಾತ ಸಂಭವಿಸಿದೆ.

ಅಪಘಾತ ಬಗ್ಗೆ ಕಾಸರಗೋಡು ನಗರಠಾಣೆ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries