ಜಾಗತಿಕ, ರಾಜಕೀಯ ಉದ್ವಿಗ್ನತೆ ಹಾಗೂ ವಿಮಾನ ಟಿಕೆಟ್ ದರ ಏರಿಕೆಯಿಂದಾಗಿ ಅಂತರರಾಷ್ಟ್ರೀಯ ಪ್ರಯಾಣವು ಅನಿಶ್ಚಿತತೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಪ್ರವಾಸಿಗರು ತಮ್ಮ ರಜೆ ದಿನಗಳನನ್ನು ಆನಂದಿಸಲು ದಕ್ಷಿಣ ಭಾರತದ ಪ್ರವಾಸಿ ತಾಣಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷವಾಗಿ ಕೇರಳಂ, ತಮಿಳುನಾಡು ಮತ್ತು ಕರ್ನಾಟಕದ ಗಿರಿಧಾಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಮೇ ತಿಂಗಳಲ್ಲೇ ಕೇರಳಂನಲ್ಲಿ ಮಳೆ ಆರಂಭವಾಗಿರುವುದರಿಂದ ಅಲ್ಲಿ ತಂಪಾದ ವಾತಾವರಣವಿದೆ. ಹೀಗಾಗಿ ಪ್ರವಾಸಿಗರು ಇಲ್ಲಿನ ಐಷಾರಾಮಿ ವಿಲ್ಲಾಗಳು ಮತ್ತು ರೆಸಾರ್ಟ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಲ್ಲಿನ ಮುನ್ನಾರ್, ವಯನಾಡ್ ಮತ್ತು ವಾಗಮೋನ್‌ನಂತಹ ತಾಣಗಳು ಈ ಋತುವಿನಲ್ಲಿ ಹೆಚ್ಚು ಜನಪ್ರಿಯವಾಗಿವೆ.
ಅಲ್ದದೇ, ಊಟಿ ಮತ್ತು ಕೂರ್ಗ್‌ನಂತಹ ಸಾಂಪ್ರದಾಯಿಕ ದಕ್ಷಿಣ ಭಾರತದ ಗಿರಿಧಾಮಗಳೂ ಸಹ ಆಹ್ಲಾದಕರ ವಾತಾವರಣ ಬಯಸುವ ಕುಟುಂಬಗಳಿಗೆ ಹೆಚ್ಚನ ತಾಣಗಳಾಗಿವೆ.
ಕಳೆದ ಕೆಲವು ತಿಂಗಳುಗಳಿಂದ ಪ್ರವಾಸಿಗರು ದೇಶೀಯ ಪ್ರಯಾಣದತ್ತ ಹೆಚ್ಚು ಒಲವು ಹೊಂದಿದ್ದಾರೆ ಎನ್ನುತ್ತಾರೆ 'ದಿ ಟ್ರಾವೆಲ್ ಪ್ಲಾನರ್ಸ್' ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅನಿಶ್ ಕುಮಾರ್ ಪಿ.ಕೆ.
ಮಧುಚಂದ್ರ ಪ್ರಿಯರು ಆರಾಮದಾಯಕ ಅನುಭವಗಳಿಗಾಗಿ ಕೇರಳಂನಲ್ಲಿರುವ ಉನ್ನತ ದರ್ಜೆಯ ಖಾಸಗಿ ಪೂಲ್ ವಿಲ್ಲಾಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಗಿರಿಧಾಮಗಳು, ವನ್ಯಜೀವಿ ಧಾಮಗಳು, ಹಿನ್ನೀರು ಮತ್ತು ಬೀಚ್ ರೆಸಾರ್ಟ್‌ಗಳನ್ನು ಒಳಗೊಂಡಿರುವ ಐಷಾರಾಮಿ ಖಾಸಗಿ ಪ್ರವಾಸಕ್ಕೆ ಭಾರತೀಯ ಕುಟುಂಬಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದೂ ಅನಿಶ್ ಕುಮಾರ್ ಹೇಳಿದ್ದಾರೆ.

