HEALTH TIPS

ನಿಮ್ಮ ಎತ್ತರಕ್ಕೆ ಸರಿಯಾದ ತೂಕ ಎಷ್ಟು? ಇಲ್ಲಿದೆ ಅಚ್ಚರಿಯ ಲೆಕ್ಕಾಚಾರ!

ಕನ್ನಡಿಯ ಮುಂದೆ ನಿಂತಾಗ ನಿಮ್ಮ ಎತ್ತರಕ್ಕೆ (Hight) ತಕ್ಕಂತೆ ನೀವಿದ್ದೀರಾ? ಕೇವಲ ಅಂದಕ್ಕಾಗಿ ಮಾತ್ರವಲ್ಲ, ಆರೋಗ್ಯದ (Health) ದೃಷ್ಟಿಯಿಂದಲೂ ನಿಮ್ಮ ತೂಕದ ಮೇಲೆ ನಿಗಾ ಇಡುವುದು ಅತಿ ಮುಖ್ಯ. ಆದರೆ ಅಸಲಿ ಆತಂಕ ಇರುವುದು ದಪ್ಪಗಾಗುವುದರಲ್ಲಿ ಅಲ್ಲ, ಬದಲಾಗಿ ಆ ತೂಕ (Weight) ಹೆಚ್ಚಳವು ನಿಮ್ಮ ದೇಹದೊಳಗೆ ಸದ್ದಿಲ್ಲದೆ ಆಮಂತ್ರಿಸುವ ಮಧುಮೇಹ, ಹೃದಯಾಘಾತ ಮತ್ತು ಸಂದುನೋವಿನಂತಹ ಮಹಾಮಾರಿಗಳಲ್ಲಿ.

ಹಾಗಾದರೆ, ನಿಮ್ಮ ಎತ್ತರಕ್ಕೆ ಇರಬೇಕಾದ ಆ 'ಮ್ಯಾಜಿಕ್ ನಂಬರ್' (Magic Number) ಯಾವುದು? ಈ ರಹಸ್ಯ ತಿಳಿಯಲು ಮತ್ತು ಮುಂಬರುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಈ ಲೆಕ್ಕಾಚಾರ ನೋಡಿ.

ಚಾರ್ಟ್​ ಏಕೆ ಅಗತ್ಯ?
ವಯಸ್ಸಿನ ಪ್ರಕಾರ ಎತ್ತರ ಮತ್ತು ತೂಕ ಎಷ್ಟು ಇರಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತಿರುತ್ತದೆ. ಆರೋಗ್ಯಕರ ಜೀವನ ನಡೆಸಲು ಈ ಮಾಹಿತಿ ಬಹಳ ಮುಖ್ಯ. ಇದೇ ಕಾರಣಕ್ಕೆ ಭಾರತೀಯರಿಗಾಗಿ ವಯಸ್ಸಿನ ಆಧಾರದ ಮೇಲೆ "ಹೈಟ್-ವೇಟ್ ಚಾರ್ಟ್" ರೂಪಿಸಲಾಗಿದೆ. ಈ ಚಾರ್ಟ್ ವ್ಯಕ್ತಿಯ ಎತ್ತರಕ್ಕೆ ತಕ್ಕ ತೂಕ ಎಷ್ಟು ಇರಬೇಕು ಎಂಬುದನ್ನು ಸರಳವಾಗಿ ತಿಳಿಸುತ್ತದೆ.

ಮಕ್ಕಳ ಸ್ವಲ್ಪ ವ್ಯತ್ಯಾಸ ಕಾಣಬಹುದು?
ಮಕ್ಕಳಲ್ಲಿ ಬೆಳವಣಿಗೆ ವೇಗವಾಗಿ ನಡೆಯುವುದರಿಂದ, ಅವರ ಎತ್ತರ ಮತ್ತು ತೂಕ ಕೂಡ ತ್ವರಿತವಾಗಿ ಬದಲಾಗುತ್ತದೆ. ಉದಾಹರಣೆಗೆ, 2 ವರ್ಷದ ಮಗು ಸರಾಸರಿ 12 ರಿಂದ 13 ಕೆಜಿ ತೂಕ ಮತ್ತು ಸುಮಾರು 85 ರಿಂದ 90 ಸೆಂ.ಮೀ ಎತ್ತರ ಹೊಂದಿರಬಹುದು. 5 ವರ್ಷಕ್ಕೆ ಇದು 18 ಕೆಜಿ ಮತ್ತು 105-110 ಸೆಂ.ಮೀ ಆಗುತ್ತದೆ. 10 ವರ್ಷಕ್ಕೆ 30 ಕೆಜಿ ತೂಕ ಹಾಗೂ 130-135 ಸೆಂ.ಮೀ ಎತ್ತರ ಸಾಮಾನ್ಯವಾಗಿ ಕಾಣಬಹುದು. ಈ ಅಂಕಿಗಳು ಸರಾಸರಿ ಮಾತ್ರವಾಗಿದ್ದು, ಮಕ್ಕಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.

ಕೆಲ ಬದಲಾವಣೆ ಸಹಜ!
ಮಕ್ಕಳು ವಯಸ್ಸಿಗೆ ಬಂದಾಗ ದೇಹದಲ್ಲಿ ದೊಡ್ಡ ಬದಲಾವಣೆಗಳು ಆಗುತ್ತವೆ. 13 ರಿಂದ 19 ವರ್ಷದೊಳಗೆ ಎತ್ತರ ವೇಗವಾಗಿ ಹೆಚ್ಚಾಗುತ್ತದೆ. 13 ವರ್ಷದವರಲ್ಲಿ ಸುಮಾರು 45 ಕೆಜಿ ತೂಕ ಮತ್ತು 150 ಸೆಂ.ಮೀ ಎತ್ತರ ಇರಬಹುದು. 16 ವರ್ಷಕ್ಕೆ ಇದು 60 ಕೆಜಿ ಮತ್ತು 160-165 ಸೆಂ.ಮೀ ಆಗುತ್ತದೆ. 18-19 ವರ್ಷಕ್ಕೆ 70 ಕೆಜಿ ತೂಕ ಮತ್ತು 170 ಸೆಂ.ಮೀ ಕ್ಕಿಂತ ಹೆಚ್ಚು ಎತ್ತರ ಸಾಮಾನ್ಯವಾಗಿ ಕಾಣಬಹುದು. ಈ ಹಂತದಲ್ಲಿ ಸರಿಯಾದ ಆಹಾರ ಮತ್ತು ವ್ಯಾಯಾಮ ಅತ್ಯಂತ ಮುಖ್ಯ.

ವಯಸ್ಕರ ಎತ್ತರ ಸಾಮಾನ್ಯವಾಗಿ ಸ್ಥಿರ!
ವಯಸ್ಕರ ವಿಷಯಕ್ಕೆ ಬಂದರೆ, ಎತ್ತರ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಆದರೆ ತೂಕ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, 160 ಸೆಂ.ಮೀ ಎತ್ತರ ಇರುವ ವ್ಯಕ್ತಿಗೆ 50 ರಿಂದ 60 ಕೆಜಿ ತೂಕ ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. 170 ಸೆಂ.ಮೀ ಎತ್ತರ ಇದ್ದರೆ 60 ರಿಂದ 70 ಕೆಜಿ ನಡುವೆ ತೂಕ ಇದ್ದರೆ ಉತ್ತಮ. ಈ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ವೈದ್ಯರ ಸಲಹೆ ಅಗತ್ಯ!
ಇದರ ಜೊತೆಗೆ, ದೇಹದ ತೂಕ ಸರಿಯಾಗಿದೆಯೇ ಎಂದು ತಿಳಿಯಲು BMI (ಬಾಡಿ ಮಾಸ್ ಇಂಡೆಕ್ಸ್) ಉಪಯೋಗಿಸಲಾಗುತ್ತದೆ. BMI 18.5 ಕ್ಕಿಂತ ಕಡಿಮೆ ಇದ್ದರೆ ಕಡಿಮೆ ತೂಕ, 18.5 ರಿಂದ 24.9 ನಡುವೆ ಇದ್ದರೆ ಸಾಮಾನ್ಯ ತೂಕ, 25 ಕ್ಕಿಂತ ಹೆಚ್ಚು ಇದ್ದರೆ ಹೆಚ್ಚು ತೂಕ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯದ ಮೂಲಭೂತ ಸೂಚಕವಾಗಿದ್ದು, ಸಂಪೂರ್ಣ ನಿರ್ಧಾರಕ್ಕೆ ವೈದ್ಯರ ಸಲಹೆ ಅಗತ್ಯ.

ಹಾರ್ಮೋನ್​ಗಳಲ್ಲಿ ಬದಲಾವಣೆ!

ಎತ್ತರ ಮತ್ತು ತೂಕದ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಜನನಗುಣ, ಆಹಾರ ಪದ್ಧತಿ, ವ್ಯಾಯಾಮ, ಜೀವನಶೈಲಿ ಮತ್ತು ಹಾರ್ಮೋನ್ ಬದಲಾವಣೆಗಳು ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರ ದೇಹ ಒಂದೇ ರೀತಿಯಾಗಿ ಇರುವುದಿಲ್ಲ.

ಆರೋಗ್ಯಕರ ಆಹಾರ ಸೇವನೆ ಒಳ್ಳೆಯದು!
ಹೈಟ್-ವೇಟ್ ಚಾರ್ಟ್ ಒಂದು ಮಾರ್ಗದರ್ಶಿ ಮಾತ್ರ. ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವುದಕ್ಕಿಂತ, ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಜೀವನಶೈಲಿ ಅನುಸರಿಸುವುದು ಮುಖ್ಯ. ನಿಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಕಾಪಾಡಿಕೊಂಡರೆ ದೀರ್ಘಕಾಲದ ಆರೋಗ್ಯವನ್ನು ಉಳಿಸಿಕೊಳ್ಳಬಹುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries