ನೀರನ್ನು ಸರಿಯಾಗಿ ಕುದಿಸದಿರುವುದು ಚಹಾ ತಯಾರಿಸುವಾಗ ಅನೇಕರು ಮಾಡುವ ಸಾಮಾನ್ಯ ತಪ್ಪು ಎಂದರೆ ನೀರು ಸರಿಯಾಗಿ ಕುದಿಯುವ ಮೊದಲೇ ಟೀ ಪುಡಿ ಅಥವಾ ಏಲಕ್ಕಿಯನ್ನು ಹಾಕುವುದು.
ಇದು ಚಹಾದ ಸತ್ವವನ್ನು ಸರಿಯಾಗಿ ಬಿಡುಗಡೆ ಮಾಡುವುದಿಲ್ಲ. ಮೊದಲು ನೀರನ್ನು ಚೆನ್ನಾಗಿ ಕುದಿಸಿ, ನಂತರವಷ್ಟೇ ಮಸಾಲೆ ಪದಾರ್ಥಗಳನ್ನು ಸೇರಿಸಬೇಕು. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದಿಲ್ಲ.
ಹಾಲಿನ ಬಳಕೆ ಮಿತವಾಗಿರಲಿ ನಿಮ್ಮ ಚಹಾದಲ್ಲಿ ನೀರಿಗಿಂತ ಹಾಲಿನ ಪ್ರಮಾಣವೇ ಹೆಚ್ಚಿದ್ದರೆ ಅದು ಅಸಿಡಿಟಿಗೆ ಮುಖ್ಯ ಕಾರಣವಾಗಬಹುದು. ಅತಿಯಾದ ಹಾಲಿನಿಂದ ಕೂಡಿದ ಚಹಾ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಚಹಾ ಸ್ವಲ್ಪ ತಿಳಿಯಾಗಿದ್ದಷ್ಟೂ ನಿಮ್ಮ ಹೊಟ್ಟೆಗೆ ಉತ್ತಮ. ಸಾಧ್ಯವಾದರೆ ಬ್ಲ್ಯಾಕ್ ಟೀ ಅಥವಾ ಕಡಿಮೆ ಹಾಲಿನ ಚಹಾ ಅಭ್ಯಾಸ ಮಾಡಿಕೊಳ್ಳಿ.
ಟೀ ಪುಡಿಯನ್ನು ಯಾವಾಗ ಸೇರಿಸಬೇಕು? ಹಲವರು ಆರಂಭದಲ್ಲೇ ಹಾಲು, ಸಕ್ಕರೆ ಮತ್ತು ಟೀ ಪುಡಿಯನ್ನು ಒಟ್ಟಿಗೆ ಸೇರಿಸಿ ಕುದಿಸುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಮೊದಲು ನೀರು, ಹಾಲು ಮತ್ತು ಸಕ್ಕರೆಯನ್ನು ಒಂದೆರಡು ನಿಮಿಷ ಕುದಿಸಿ, ಸಕ್ಕರೆ ಪೂರ್ಣವಾಗಿ ಕರಗಿದ ನಂತರವಷ್ಟೇ ಟೀ ಪುಡಿಯನ್ನು ಸೇರಿಸುವುದು ಸೂಕ್ತ.
ಅತಿಯಾಗಿ ಕುದಿಸುವುದು ಬೇಡ ಚಹಾ ಸ್ಟ್ರಾಂಗ್ ಆಗಿರಲಿ ಎಂದು ಹೆಚ್ಚು ಹೊತ್ತು ಕುದಿಸುವುದು ಅಸಿಡಿಟಿಗೆ ನೇರ ಆಹ್ವಾನ ನೀಡಿದಂತೆ. ಟೀ ಪುಡಿಯನ್ನು ಹಾಕಿದ ನಂತರ ಕೇವಲ 1-2 ನಿಮಿಷಗಳ ಕಾಲ ಸಿಮ್‌ನಲ್ಲಿ ಕುದಿಸಿ ನಂತರ ಕೆಳಗಿಳಿಸಬೇಕು. ಅತಿಯಾಗಿ ಕುದಿಸುವುದರಿಂದ ಚಹಾದಲ್ಲಿ ‘ಟ್ಯಾನಿನ್’ ಎಂಬ ಅಂಶ ಹೆಚ್ಚಾಗಿ ಹೊಟ್ಟೆಯಲ್ಲಿ ಕಿರಿಕಿರಿ ಉಂಟುಮಾಡುತ್ತದೆ.
ಮತ್ತೆ ಮತ್ತೆ ಕಾಯಿಸಬೇಡಿ ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಕಾಯಿಸಿ ಕುಡಿಯುವ ಹವ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಚಹಾದ ರುಚಿಯನ್ನು ಕೆಡಿಸುವುದಲ್ಲದೆ, ಅದರ ಆಮ್ಲೀಯತೆಯನ್ನು (Acidic level) ಹೆಚ್ಚಿಸುತ್ತದೆ. ಆದ್ದರಿಂದ ನಿಮಗೆ ಎಷ್ಟು ಬೇಕೋ ಅಷ್ಟನ್ನೇ ತಯಾರಿಸಿ ತಕ್ಷಣವೇ ಸೇವಿಸುವುದು ಉತ್ತಮ.

