ನವದೆಹಲಿ: ನೀಟ್-ಯುಜಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್‌ಇ ಪರೀಕ್ಷೆಯಲ್ಲಿ ಒಎಸ್‌ಎಂ ಗೊಂದಲದ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿಯೇ ಈಗ ಸಿಯುಇಟಿ-ಯುಜಿ ಪರೀಕ್ಷೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. 3,765 ಅಭ್ಯರ್ಥಿಗಳು ಸಿಯುಇಟಿ-ಯುಜಿ ಪರೀಕ್ಷೆಯಲು ವಂಚಿತರಾಗಿದ್ದಾರೆ.
'ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ 2026ರ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಯುಇಟಿ-ಯುಜಿ) ತಾಂತ್ರಿಕ ದೋಷಗಳ ಕಾರಣ ದೇಶದ ವಿವಿಧ ಭಾಗಗಳಲ್ಲಿ ಶನಿವಾರ ತಡವಾಗಿ ಆರಂಭವಾಯಿತು' ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಹೇಳಿದೆ.
ಬೆಳಿಗ್ಗೆ 9 ಗಂಟೆ ಮತ್ತು ಮಧ್ಯಾಹ್ನ 3 ಗಂಟೆಗೆ ಪರೀಕ್ಷೆಗಳು ಆರಂಭವಾಗಬೇಕಿದ್ದವು. ಆದರೆ, 1ರಿಂದ 2 ತಾಸು ತಡವಾಗಿ ಪರೀಕ್ಷೆ ಆರಂಭವಾಗಿವೆ. 'ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆದ ಅನನುಕೂಲಕ್ಕಾಗಿ ವಿಷಾದವಿದೆ' ಎಂದೂ ಎನ್‌ಟಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
'ದೋಷಗಳನ್ನು ಸರಿಪಡಿಸಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗಳು ತಡವಾಗಿ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯವನ್ನೂ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಪರೀಕ್ಷೆಯು 4ಕ್ಕೆ ಆರಂಭವಾಯಿತು. ಬೆಳಗ್ಗೆ ನಡೆದ ಪರೀಕ್ಷೆಯಲ್ಲಿಯೂ ಪರೀಕ್ಷೆ ಬರೆಯಲು ಪೂರ್ಣ ಸಮಯ ನೀಡಲಾಯಿತು' ಎಂದಿದೆ.
2025ರಿಂದ ಸಿಯುಇಟಿ-ಯುಜಿ ಪರೀಕ್ಷೆಯನ್ನು ಆನ್‌ಲೈನ್‌ಗೊಳಿಸಲಾಗಿದೆ. ಪರೀಕ್ಷೆಯ ಎಲ್ಲ ತಾಂತ್ರಿಕ ವಿಚಾರಗಳ ಜವಾಬ್ದಾರಿಗಳನ್ನು ಟಿಸಿಎಸ್ ಕಂಪನಿಗೆ ವಹಿಸಲಾಗಿದೆ.
'ಪರೀಕ್ಷಾ ಕೇಂದ್ರದಲ್ಲಿ ಸರಿಯಾಗಿ ಎನ್ನನ್ನೂ ಹೇಳುತ್ತಿಲ್ಲ'
'ವಿದ್ಯಾರ್ಥಿಗಳನ್ನು 3-4 ತಾಸುಗಳ ವರೆಗೆ ಕಾಯುವಂತೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಯಾರೂ ಏನ್ನನ್ನೂ ಸರಿಯಾಗಿ ಹೇಳುತ್ತಿಲ್ಲ. ಯಾವುದೇ ವ್ಯವಸ್ಥೆಗಳಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ವಿಪರೀತ ಸೆಕೆಯಲ್ಲಿ ಬಳಲುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಪರೀಕ್ಷೆಯೊಂದರ ಸಂಬಂಧ ಈ ರೀತಿ ನಡೆಯುವುದು ಸರಿಯಲ್ಲ' ಎಂದು 'ಎಕ್ಸ್'ನಲ್ಲಿ ದೆಹಲಿಯ ಪೋಷಕರೊಬ್ಬರು ಬರೆದುಕೊಂಡಿದ್ದಾರೆ.
'ಮತ್ತೊಮ್ಮೆ ಪರೀಕ್ಷೆಗೆ ಅವಕಾಶ'
ತಡವಾಗಿ ಪರೀಕ್ಷೆಗಳು ಆರಂಭವಾದ ಬಳಿಕ ಹಲವು ಅಭ್ಯರ್ಥಿಗಳು (ಶೇ 95ರಷ್ಟು) ಪರೀಕ್ಷೆ ಬರೆದಿದ್ದಾರೆ. 3765 ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು ಬಯೋಮೆಟ್ರಿಕ್ ನೋಂದಣಿಯನ್ನೂ ಮಾಡಿಸಿಕೊಂಡಿದ್ದರು. ಆದರೆ ಪರೀಕ್ಷೆ ತಡವಾಗಿ ಆರಂಭವಾಗಿದ್ದರಿಂದ ಪರೀಕ್ಷೆ ಬರೆಯದೇ ಹೊರಹೋದರು. ಇದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಇವರಿಗಾಗಿಯೇ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ತಾಂತ್ರಿಕ ದೋಷ ಕಾಣಿಸಿಕೊಂಡ ಬಗ್ಗೆ ವಿಶ್ಲೇಷಣೆ ನಡೆಸಿ ತಕ್ಷಣವೇ ವರದಿ ನೀಡುವಂತೆ ಟಿಸಿಎಸ್‌ಗೆ ಹೇಳಲಾಗಿದೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ
ಯಾವಾಗಲೂ ಒಂದಿಲ್ಲೊಂದು ಸಮಸ್ಯೆ
2022ರಿಂದ ಆರಂಭವಾಗಿರುವ ಈ ಪರೀಕ್ಷೆಯು ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ಆದರೆ ಇದು ಆರಂಭವಾಗಿ ಇಲ್ಲಿವರೆಗೂ ಒಂದಿಲ್ಲೊಂದು ಸಮಸ್ಯೆಗಳಿಂದ ಕೂಡಿದೆ. ಕೊನೇ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲು ಲಾಗ್‌ಇನ್ ಆಗದಿರುವ ಸಮಸ್ಯೆಗಳು ಕಂಡುಬರುತ್ತಲೇ ಇವೆ. ತಾಂತ್ರಿಕ ಸಮ್ಯಸೆಯ ಕಾರಣ ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಪ್ರವೇಶ ಚೀಟಿಯಲ್ಲಿ ವಿವರಗಳು ತಪ್ಪಾಗಿದ್ದು ಪರೀಕ್ಷಾ ದಿನಾಂಕವೇ ತಪ್ಪಾಗಿ ಮುದ್ರಿತವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.
-ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕನೀಟ್ ಸಿಬಿಎಸ್‌ಇ ಎಸ್‌ಎಸ್‌ಸಿ ಮತ್ತು ಇವತ್ತು ಸಿಯುಇಟಿ. ನಾಲ್ಕು ಪರೀಕ್ಷೆಗಳು- ಒಂದು ಕೋಟಿ ವಿದ್ಯಾರ್ಥಿಗಳು. ಒಂದೂ ಪರೀಕ್ಷೆಯನ್ನೂ ಪ್ರಮಾಣಿಕವಾಗಿ ನಡೆಸಿಲ್ಲ. ತಮ್ಮನ್ನು ತಾವು ವಿಶ್ವಗುರು ಎಂದು ಕರೆಸಿಕೊಳ್ಳುತ್ತಾರೆ. ಆದರೆ ಒಂದೇ ಒಂದು ಪರೀಕ್ಷೆಯನ್ನೂ ಸರಿಯಾಗಿ ನಡೆಸುತ್ತಿಲ್ಲ. ಮೋದಿ ಅವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಯಾವ ಪೀಳಿಗೆಯವರ ಭವಿಷ್ಯವನ್ನು ನಾಶ ಪಡಿಸುತ್ತಿದ್ದೀರೊ ಅದೇ ಪೀಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತದೆ. -ಕೆ. ಕೃತಿವಾಸನ್, ಸಿಇಒ ಟಿಸಿಎಸ್ ಕಂಪನಿಬೆಳಿಗ್ಗೆ ನಡೆಯಬೇಕಿದ್ದ ಪರೀಕ್ಷೆಗಳು ಒಂದು ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಎರಡು ತಾಸು ತಡವಾಗಿ ಆರಂಭವಾಯಿತು. ಅನನುಕೂಲಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ.-ಅರವಿಂದ ಕೇಜ್ರಿವಾಲ್, ಎಎಪಿ ಮುಖ್ಯಸ್ಥದೇಶಕ್ಕೆ ಒಬ್ಬ ಶಿಕ್ಷಿತ ಪ್ರಧಾನಿ ಬೇಕು. -ಸೌರಬ್ ಭಾರದ್ವಾಜ್, ಎಎಪಿ ದೆಹಲಿ ಘಟಕದ ಅಧ್ಯಕ್ಷದೆಹಲಿ ನೊಯಿಡಾ ಅಂಬಾಲಾ ವಾರಣಸಿ ಬೆಂಗಳೂರು ಕಾನ್ಪುರ ಮತ್ತು ಇತರೆ ಕೆಲವು ನಗರಗಳಲ್ಲಿ ಸಿಯುಇಟಿ-ಯುಜಿ ಪರೀಕ್ಷೆಗಳು ತಡವಾಗಿ ಆರಂಭವಾದ ಬಗ್ಗೆ ವರದಿಗಳಾಗುತ್ತಿವೆ. ಕೆಲವು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕರೆ ಕೆಲವರಿಗೆ 11.30ಕ್ಕೆ ಸಿಕ್ಕಿದೆ.

