ಮುಳ್ಳೇರಿಯ: ಕಾರಡ್ಕ ಕಾರ್ಲೆ ಎಂಬಲ್ಲಿ ಮನೆಯ ಸಮೀಪದ ಆವರಣಗೋಡೆಯಿಲ್ಲದ ಕೆರೆಗೆ ಬಿದ್ದು ಎರಡುವರೆ ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಕಾರ್ಲೆ ನಿವಾಸಿ ಲೋಹಿತ್ ಶೆಟ್ಟಿ-ದಿವ್ಯ ದಂಪತಿ ಪುತ್ರ ದೇವಾಂಗ್ ಮೃತಪಟ್ಟ ಬಾಲಕ. ನಿನ್ನೆ ಸಂಜೆ 6 ಗಂಟೆ ವೇಳೆ ಮನೆಯಿಂದ 300 ಮೀಟರ್ ದೂರದ ತೆಂಗಿನ ತೋಟದಲ್ಲಿದ್ದ ಕೆರೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸುವ ಮಧ್ಯೆ ಕೆರೆಯಲ್ಲಿ ಮಗುವನ್ನು ಪತ್ತೆಹಚ್ಚಲಾಗಿದೆ.
ಮನೆಯಂಗಳದಲ್ಲಿ ಆಟವಾಡುತ್ತಾ ಕೆರೆಯ ಕಡೆ ತೆರಳಿದ್ದು, ನೀರನ್ನು ಕಂಡು ಆಟವಾಡಲು ಇಳಿದಾಗ ದುರಂತ ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ನೀರಲ್ಲಿ ಮುಳುಗೇಳುತ್ತಿದ್ದ ಮಗುವನ್ನು ನೀರಿನಿಂದ ಹೊರತೆಗೆದು ಚೆಂಗಳದ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ. ಅಸಹಜ ಸಾವಿನ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


