ಉಪ್ಪಳ: ತುಳುಸಿರಿ ಫಾರ್ಮರ್ಸ್ ಸಂಸ್ಥೆ ಮಂಜೇಶ್ವರ ಇದರ ಆಶ್ರಯದಲ್ಲಿ ತೆಂಗಿನಕಾಯಿ ಖರೀದಿ ಮತ್ತು ಕೃಷಿಗೆ ಸಂಬಂಧಿಸಿದ ಸಲಕರಣೆಗಳ ಮಾರಾಟ ಕೇಂದ್ರದ ಉದ್ಘಾಟನೆಯನ್ನು ನಬಾರ್ಡ್ ನ ಜಿಲ್ಲಾ ಪ್ರಬಂಧಕ ಶರುನ್ ವಾಸ್ ನೆರವೇರಿಸಿ ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಸಂಸ್ಥೆಯು ಅಭಿವೃದ್ಧಿ ಹೊಂದುವಂತೆ ಶುಭ ಹಾರೈಸಿದರು. ಸಂಸ್ಥೆಗೆ ನಬಾರ್ಡ್ ನಿಂದ ಪ್ರೋತ್ಸಾಹ ಸವಲತ್ತು ನೀಡುವುದಾಗಿ ತಿಳಿಸಿದರು. ಪಿರಮಿಡ್ ಸಂಸ್ಥೆಯ ಸಂಯೋಜಕ ಜಯಪ್ರಕಾಶ್ ಸಂಸ್ಥೆಯ ಪ್ರಗತಿಗೆ ಮಾರ್ಗದರ್ಶನ ನೀಡಿದರು.
ಬಳಿಕ ಜರಗಿದ ನಿರ್ದೇಶಕರ ತಿಂಗಳ ಸಭೆಯಲ್ಲಿ ಸಂಸ್ಥೆಯಿಂದ ರಸಗೊಬ್ಬರ, ಸಾವಯವ ಗೊಬ್ಬರ ಖರೀದಿ ಮಾಡುವ ಸದಸ್ಯರಿಗೆ ರಿಯಾಯಿತಿ ದರದಲ್ಲಿ ನೀಡುವಂತೆ ತೀರ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ ಕೊಮ್ಮಂಡ ಸ್ವಾಗತಿಸಿ, ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ಸಂಸ್ಥೆಯ ನಿರ್ದೇಶಕರುಗಳು ಉಪಸ್ಥಿತರಿದ್ದರು.

.jpg)
.jpg)
