ಕಾಸರಗೊಡು: ದೇವಾಲಯಗಳು ಚಂಚಲ ಮನಸ್ಸನ್ನು ಏಕಾಗ್ರತೆಯತ್ತ ಕೊಂಡೊಯ್ಯುವ ಆತ್ಮೋನ್ನತಿಯ ತಾಣಗಳಾಗಿದ್ದು, ದೇಗುಲಗಳ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಕಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ-ಸಾಂಸ್ಕøಥಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನಿಡಿದರು. ಸಾಮಾಜಿಕವಾಗಿ ಒಗ್ಗಟ್ಟಿನಿಂದ ಕೈಗೊಳ್ಳುವ ಕಾರ್ಯಗಳಿಂದ ಮಹತ್ತರ ಬದಲಾವಣೆ ಕಂಡುಕೊಳ್ಳಲು ಸಾಧ್ಯ. ಇದಕ್ಕೆ ನಡಿನಾದ್ಯಂತ ನಡೆದುಬರುತ್ತಿರುವ ದೇವಾಲಯಗಳ ಪುನರುದ್ಧರಣ ಕಾರ್ಯಗಳು ದಾಕ್ಷಿಯಾಗಿರುವುದಾಗಿ ತಿಳಿಸಿದರುವೀ ಸಂದರ್ಭ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಮತ್ತು ಹಾರ್ಮೋನಿಯಂ ಹಿರಿಯ ವಾದಕ ಭಾಸ್ಕರ ಕಾಳ್ಯಂಗಾಡು ಅವರಿಗೆ ಗೌರವಾರ್ಪಣೆ ನಡೆಯಿತು.
ಜಾನಪದ ವಿದ್ವಾಂಸ ಡಾ.ರವೀಶ್ ಪಡುಮಲೆ ಧಾರ್ಮಿಕ ಭಾಷಣ ಮಾಡಿದರು. ಪತ್ರಕರ್ತ ವೀಜಿ.ಕಾಸರಗೋಡು ಅಭಿನಂದನಾ ಭಾಷಣ ಮಾಡಿದರು. ಕಾಳ್ಯಂಗಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್, ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ರಘು ಕೆ.ಮೀಪುಗುರಿ, ದೇವರಗುಡ್ಡೆ ಕ್ಷೇತ್ರದ ಮಹಾಬಲ ರೈ, ಶೇಷವನ ಕ್ಷತ್ರದ ಅಧ್ಯಕ್ಷ ವೇಣುಗೋಪಾಲ ಮಾಸ್ಟರ್, ಪಾರೆಕಟ್ಟೆ ಶ್ರೀ ಮುತ್ತಪ್ಪನ್ ಕ್ಷೇತ್ರದ ರಘುವೀರ್ ಶೆಟ್ಟಿ, ಕಾಳ್ಯಂಗಾಡು ಎಸ್.ಎಂ.ಎಸ್. ಕ್ಲಬ್ ಪ್ರಧಾನ ಕಾರ್ಯದರ್ಶಿ ಅಜಯ್ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ ಸ್ವಾಗತಿಸಿದರು. ಪ್ರಶಾಂತಿ ಪ್ರಶಾಂತ್ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಡ್ಲು ಪ್ರಾಸ್ತಾವಿಕ ಭಾಷಣ ಮಾಡಿದರು. ಸುರೇಖಾದಯಾನಂದ್ ಟೀಚರ್ ವಂದಿಸಿದರು.



