HEALTH TIPS

ಆನ್ ಲೈನ್ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಔಷಧ ಮಾರಾಟಗಾರರ ಮುಷ್ಕರ: ಔಷಧ ಪೂರೈಕೆಯನ್ನು ಖಾತರಿಗೊಳಿಸಿದ ಒಡಿಶಾ ಸರ್ಕಾರ

ಭುವನೇಶ್ವರ: ಆನ್ ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಬುಧವಾರ ಔಷಧ ಮಾರಾಟಗಾರರು ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದು, ರಾಜ್ಯಾದ್ಯಂತ ಅಗತ್ಯ ಔಷಧಗಳು ಯಾವುದೇ ವ್ಯತ್ಯಯವಿಲ್ಲದಂತೆ ಸರಬರಾಜಾಗುವುದನ್ನು ಖಾತರಿಗೊಳಿಸುವಂತೆ ಎಲ್ಲ ಔಷಧ ಪರೀಕ್ಷಕರು ಹಾಗೂ ಸಹಾಯಕ ಔಷಧ ನಿಯಂತ್ರಕರಿಗೆ ಒಡಿಶಾ ಔಷಧ ನಿಯಂತ್ರಣ ನಿರ್ದೇಶನಾಲಯ ಸೂಚನೆ ನೀಡಿದೆ.

ಅನಿರ್ಬಂಧಿತ ಆನ್ ಲೈನ್ ಔಷಧ ಮಾರಾಟ ಹಾಗೂ ಬೃಹತ್ ಕಾರ್ಪೊರೇಟ್ ಉದ್ಯಮಗಳು ಭಾರಿ ಪ್ರಮಾಣದ ರಿಯಾಯಿತಿ ನೀಡುವ ಪದ್ಧತಿಯನ್ನು ವಿರೋಧಿಸಿ ́ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ʼ(All India Organisation of Chemists and Druggists) (AIOCD) ಬುಧವಾರ ಕರೆ ನೀಡಿದ್ದ ಒಂದು ದಿನದ ಮುಷ್ಕರಕ್ಕೆ ಉತ್ಕಲ್ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಬೆಂಬಲ ಸೂಚಿಸಿದ ಬೆನ್ನಿಗೇ ಈ ಸೂಚನೆ ಹೊರ ಬಿದ್ದಿದೆ.

ಬುಧವಾರ ನಡೆಯಲಿರುವ ಒಂದು ದಿನದ ಮುಷ್ಕರದಲ್ಲಿ ಸುಮಾರು 30,000ಕ್ಕೂ ಹೆಚ್ಚು ಔಷಧ ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಅಕ್ರಮ ಇ-ಔಷಧ ಮಾರಾಟ ಸಂಸ್ಥೆಗಳು ಹಾಗೂ ನಿಗದಿಗಿಂತ ಕಡಿಮೆ ದರದಲ್ಲಿ ಔಷಧಗಳನ್ನು ಮಾರಾಟ ಮಾಡುವುದರಿಂದಾಗಿ ಸಣ್ಣ ಮತ್ತು ಸ್ವತಂತ್ರ ಔಷಧ ಚಿಲ್ಲರೆ ಮಾರಾಟಗಾರರು, ನಿರ್ದಿಷ್ಟವಾಗಿ ಗ್ರಾಮೀಣ ಮತ್ತು ಅರೆ ಪಟ್ಟಣಗಳಲ್ಲಿನ ಔಷಧ ಮಾರಾಟಗಾರರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮವುಂಟಾಗಿದೆ ಎಂದು ಉತ್ಕಲ್ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಆರೋಪಿಸಿದೆ.

ಈ ಪ್ರತಿಭಟನೆಯು ಸಾರ್ವಜನಿಕ ಆರೋಗ್ಯ ಮತ್ತು ಸಣ್ಣ ಔಷಧ ಮಾರಾಟಗಾರರಿಬ್ಬರ ಹಿತಾಸಕ್ತಿಯನ್ನೂ ರಕ್ಷಿಸುವ ಗುರಿ ಹೊಂದಿದೆ ಎಂದು ಅದು ಹೇಳಿದೆ. ಔಷಧ ಸಲಹಾ ಚೀಟಿಯನ್ನು ಪದೇ ಪದೇ ಬಳಸಿಕೊಳ್ಳುವ ಮೂಲಕ ಹಾಗೂ ಆಯಂಟಿಬಯಾಟಿಕ್ ಮತ್ತು ವ್ಯಸನವಾಗಿ ಮಾರ್ಪಡುವ ಔಷಧಗಳನ್ನು ಡಿಜಿಟಲ್ ಜಾಲಗಳ ಮೂಲಕ ಅನಿಯಂತ್ರಿತವಾಗಿ ಮಾರಾಟ ಮಾಡುವ ಮೂಲಕ, ಸಾಮಾನ್ಯ ಶಾಸನ ನಿಯಮಗಳು (ಜಿಎಸ್‌ಆರ್) 817(ಇ) ಮತ್ತು ಜಿಎಸ್‌ಆರ್ 220(ಇ) ಅಡಿಯಲ್ಲಿನ ಶಾಸನಾತ್ಮಕ ವಿನಾಯಿತಿಯನ್ನು ಆನ್ ಲೈನ್ ಔಷಧ ಮಾರಾಟ ವೇದಿಕೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅದು ಆರೋಪಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries