ಸಮರಸ ಚಿತ್ರಸುದ್ದಿ: ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಪೆರ್ಲ (ಬದಿಯಡ್ಕ) ಶಾಖೆಯ ಸಕ್ರಿಯ ಸದಸ್ಯ ದಾಮೋದರ ಮೂಲ್ಯ ಬಜಕೂಡ್ಲು ಇವರ ತಾಯಿಯ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಂಸ್ಥೆಯ ವತಿಯಿಂದ ನೀಡಲಾಗುವ ಸಹಾಯಧನದ ಮೊತ್ತ ರೂ 50,000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕ ವೆಂಕಟರಮಣ ಭಟ್ ಸದಸ್ಯರ ಮನೆಗೆ ತೆರಳಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ಮತ್ತು ಶಾಖಾ ವ್ಯವಸ್ಥಾಪಕ ಶ್ಯಾಂ ಪ್ರಶಾಂತ ಬದಿಯಡ್ಕ ಉಪಸ್ಥಿತರಿದ್ದರು.

.jpg)
