ಭೋಪಾಲ್ (PTI): ನಿವೃತ್ತ ನ್ಯಾಯಾಧೀಶರು ಮತ್ತು ಅವರ ಪುತ್ರನ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ನಡೆಸಲು ಆರು ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಭೋಪಾಲ್ ಪೊಲೀಸರು ತಿಳಿಸಿದರು.
ನಿವೃತ್ತ ನ್ಯಾಯಧೀಶರಾದ ಗಿರಿಬಾಲಾ ಸಿಂಗ್ ಅವರ ಪುತ್ರ, ವಕೀಲರಾದ ಸಮರ್ಥ್ ಸಿಂಗ್ ಅವರ ಪತ್ನಿ ತ್ವಿಶಾ ಶರ್ಮಾ (33) ಮೃತದೇಹವು ಇಲ್ಲಿನ ಕತಾರ ಹಿಲ್ಸ್ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೇ 12ರಂದು ಪತ್ತೆಯಾಯಿತು.
ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಗಿರಿಬಾಲಾ ಹಾಗೂ ಸಮರ್ಥ್ ಅವರನ್ನು ಪತ್ತೆಹಚ್ಚಲು, ಬಂಧಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಸಹಾಯಕ ಪೊಲೀಸ್ ಆಯುಕ್ತ ರಜನೀಶ್ ಕಶ್ಯಪ್ ತಿಳಿಸಿದರು.

