ಪೆರ್ಲ: ಶ್ರೀ ಸಂಸ್ಥಾನ ಗೋಕರ್ಣದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದೊಂದಿಗೆ ಚಟುವಟಿಕೆ ನಡೆಸುತ್ತಿರುವ ಮಂಜೇಶ್ವರ ತಾಲೂಕು ಬದಿಯಡ್ಕ ಹೋಬಳಿಯ ಪೆರ್ಲ ಸನಿಹದ ಬಜಕೂಡ್ಲು ಅಮೃತಧಾರಾ ಗೋಶಾಲೆ, 'ಗೋಲೋಕ'ದಲ್ಲಿ ವಿಶಿಷ್ಟ 'ಶನಿ ನಮನ-ತಾಪ ಶಮನ' (ಶನಿಜಯಂತಿಯ ಪುಣ್ಯಪರ್ವ)ಕಾರ್ಯಕ್ರಮ ಮೇ 16ಮತ್ತು 17ರಂದು ಜರುಗಲಿದೆ.
16ರಂದು ಬೆಳಗ್ಗೆ 4.30ಕ್ಕೆ ಗುರು ವಂದನೆ, ದೇವತಾ ಪ್ರಾರ್ಥನೆ, ಸ್ನಾನ, ಸಂಕಲ್ಪ, ಗೋಪೂಜೆ 6ರಿಂದ ಶ್ರೀ ಮಹಾಗಣಪತಿ ಹವನ ಸಹಿತ ಜಲಾಭಿಷೇಕ ಆರಂಭಗೊಳ್ಳುವುದು.
7ಕ್ಕೆ ಶ್ರೀ ಗೋಪಾಲಕೃಷ್ಣ ಪೂಜೆ, ಗೋಸ್ತುತಿ, ಗೋಪೂಜೆ 8.30 ರಿಂದ ಶ್ರೀ ಮಹಾಗಣಪತಿ ಹವನ, ಪೂರ್ಣಾಹುತಿ, ಕನ್ಯಾ ಪೂಜೆ 10.30 ರಿಂದ ಶ್ರೀ ಹನುಮಚ್ಚಾಲೀಸಾ ಸ್ತೋತ್ರ ಪಾರಾಯಣ ನಡೆಯಲಿದೆ. ಸಂಜೆ 3ರಿಂದ ಶ್ರೀ ಹನುಮಾನ್ ಚಾಲೀಸಾ ಪಾರಾಯಣ, 5ರಿಂದ ಶ್ರೀ ಕ್ಷೇತ್ರೋತ್ಸವ ಆರಂಭಗೊಳ್ಳುವುದು. 17ರಂದು ಬೆಳಗ್ಗೆ 6.06 ಶ್ರೀ ಮಹಾಗಣಪತಿ ಸ್ಫೂರ್ತಿಸಹಿತ ಅಲಂಕಾರ ಪಾರಾಯಣ ನಡೆಯುವುದು.
ಸಿದ್ಧತೆ ಪೂರ್ಣ:
ಮೇ 16ರಂದು ನಡೆಯಲಿರುವ ವಿಶಿಷ್ಟ 'ಶನಿ ನಮನ-ತಾಪ ಶಮನ' ಕಾರ್ಯಕ್ರಮದ ಸಿದ್ಧತೆ ಪೂರ್ತಿಗೊಂಡಿದ್ದು, ವಿವಿಧ ವಲಯ, ಮಂಡಲಗಳಿಂದ ಸುವಸ್ತುಗಳು ಗೋಶಲೆಗೆ ಆಗಮಿಸುತ್ತಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.




