ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ದ್ರಾವಿಡಯೇತರ ಪಕ್ಷದ ಯುಗಾರಂಭವಾಗಿದೆ.
ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣವಚನ ಬೋಧಿಸಿದ್ದಾರೆ.
ವಿಜಯ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಮುಖ ಆಕರ್ಷಣೆಯಾಗಿದ್ದರು. ಅಲ್ಲದೆ ವಿಜಯ್ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಏಪ್ರಿಲ್ 23ರಂದು ನಡೆದ ಮತದಾನದ ವೇಳೆ ಆಡಳಿತ ಪಕ್ಷ ಡಿಎಂಕೆಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಆದರೆ ಮೇ 4ರಂದು ಪ್ರಕಟಗೊಂಡ ಫಲಿತಾಂಶದಲ್ಲಿ 108 ಸ್ಥಾನಗಳಲ್ಲಿ ಗೆದ್ದಿದ್ದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಚುನಾವಣಾ ಪೂರ್ವ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಚುನಾವಣೋತ್ತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸರ್ಕಾರ ರಚಿಸಲು ಟಿವಿಕೆಗೆ ಬೆಂಬಲ ಸೂಚಿಸಿತ್ತು.
ಕಾಂಗ್ರೆಸ್‌ನ ಐವರು ಶಾಸಕರು ಟಿವಿಕೆಗೆ ಬಂಬಲ ನೀಡಿದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಪಕ್ಷದೊಂದಿಗಿನ ಹಲವು ದಶಕಗಳ ಸಂಬಂಧವನ್ನು ಕಡಿದುಕೊಂಡಿತು. ಕಾಂಗ್ರೆಸ್‌ನ ಈ ನಿಲುವನ್ನು ಟೀಕಿಸಿರುವ ಡಿಎಂಕೆ, ನಂಬಿಕೆ ದ್ರೋಹ ಬಗೆದಿದೆ ಎಂದು ಆರೋಪಿಸಿತ್ತು.
ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ವಿಜಯ್ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಕಾಂಗ್ರೆಸ್ ತಿಳಿಸಿದೆ. ಅಲ್ಲದೆ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯೂ ಇದೆ.

ರಾಹುಲ್ ಗಾಂಧಿ, ವಿಜಯ್
ವಿಜಯ್ ಅವರ ಬಗ್ಗೆ ರಾಹುಲ್ ಗಾಂಧಿ ಮೊದಲಿನಿಂದಲೂ ಒಲವನ್ನು ಹೊಂದಿದ್ದರು. ಟಿವಿಕೆಯ ಅಭೂತಪೂರ್ವ ಸಾಧನೆ ಬಳಿಕ ಕನಿಷ್ಠ ಮೂರು ಸಲ ದೂರವಾಣಿ ಮೂಲಕ ಮಾತನಾಡಿದ್ದಾರೆ. ಅಲ್ಲದೆ ಸರ್ಕಾರ ರಚನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸ್ನೇಹ ಬಾಂಧವು ದಕ್ಷಿಣ ಭಾರತದಲ್ಲಿ ಹೊಸ ರಾಜಕೀಯ ಯುಗಾರಂಭಕ್ಕೆ ನಾಂದಿಯಾಗಿದೆ.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ್ರಾವಿಡಯೇತರ ಪಕ್ಷ ಸರ್ಕಾರ ರಚಿಸಿದೆ. ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳ ಸಂಪ್ರದಾಯಗಳನ್ನು ಮುರಿಯುವ ಮೂಲಕ ವಿಜಯ್ ಅವರ ಟಿವಿಕೆ ಪಕ್ಷ ದಾಖಲೆ ಬರೆದಿದೆ.
ತಮಿಳುನಾಡಿನಲ್ಲಿ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 118 ಆಗಿದೆ. ಅಲ್ಲದೆ ಕಾಂಗ್ರೆಸ್ ಜೊತೆಗೆ ಸಿಪಿಐ, ಸಿಪಿಎಂ, ವಿಸಿಕೆ ಹಾಗೂ ಐಯುಎಂಎಲ್ ಬೆಂಬಲದೊಂದಿಗೆ ಟಿವಿಕೆ ಸಮ್ಮಿಶ್ರ ಸರ್ಕಾರ ರಚಿಸಿದೆ. ಈ ಎಲ್ಲ ಪಕ್ಷಗಳು ತಲಾ ಇಬ್ಬರು ಸ್ಥಾನಗಳನ್ನು ಹೊಂದಿದೆ.
ರಾಹುಲ್ ಗಾಂಧಿ, ವಿಜಯ್

ವಿಜಯ್

ರಾಹುಲ್ ಗಾಂಧಿ, ವಿಜಯ್, ಅರ್ಲೇಕರ್

ವಿಜಯ್

ವಿಜಯ್

ರಾಹುಲ್ ಗಾಂಧಿ, ವಿಜಯ್

ವಿಜಯ್

ವಿಜಯ್

ವಿಜಯ್
ರಾಹುಲ್ ಗಾಂಧಿ, ವಿಜಯ್

