HEALTH TIPS

KERALA | 'ಮೆದುಳು ತಿನ್ನುವ ಅಮೀಬಾ' ಸೋಂಕಿನಿಂದ ವೃದ್ಧೆ ಮೃತ್ಯು

 ತಿರುವನಂತಪುರಂ: ಕೇರಳಂನಲ್ಲಿ 'ಮೆದುಳು ತಿನ್ನುವ ಅಮೀಬಾ' ಎಂದು ಕರೆಯಲಾಗುವ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ (Pಂಒ) ಸೋಂಕಿನಿಂದ 73 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಎರ್ನಾಕುಲಂ ಜಿಲ್ಲೆಯ ಕೋತಮಂಗಲಂ ಸಮೀಪದ ನೆಲ್ಲಿಕುಳಿಯ ನಿವಾಸಿಯಾಗಿದ್ದ ಅವರು ಮೇ 15ರಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಹಿಳೆಗೆ ಮೇ 6ರಂದು ಜ್ವರ ಮತ್ತು ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಮೇ 8ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಲುವಾದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಕೋತಮಂಗಲಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ವೇಳೆ ಕಾಲುವೆಯ ನೀರಿನಿಂದ ಮುಖ ತೊಳೆಯುತ್ತಿದ್ದರಿಂದ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ.

'ನೇಗ್ಲೇರಿಯಾ ಫೌಲೆರಿ' (ಓಚಿegಟeಡಿiಚಿ ಜಿoತಿಟeಡಿi) ಎಂಬ ಸೂಕ್ಷ್ಮ ಅಮೀಬಾದಿಂದ ಈ ಸೋಂಕು ಉಂಟಾಗುತ್ತದೆ. ಸಿಹಿನೀರಿನ ಕೆರೆ, ಕಾಲುವೆ ಹಾಗೂ ನಿಂತ ನೀರಿನ ಜಲಮೂಲಗಳಲ್ಲಿ ಈ ಅಮೀಬಾ ಕಂಡುಬರುತ್ತದೆ. ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸುವ ಅಮೀಬಾ ಮೆದುಳಿನ ಅಂಗಾಂಶಕ್ಕೆ ಹಾನಿ ಉಂಟುಮಾಡಿ ತೀವ್ರ ಸೋಂಕು ಹರಡುತ್ತದೆ.

ತೀವ್ರ ತಲೆನೋವು, ಜ್ವರ, ಕುತ್ತಿಗೆ ಗಟ್ಟಿಯಾಗುವುದು, ವಾಂತಿ, ಗೊಂದಲದ ಸ್ಥಿತಿ ಮತ್ತು ಫಿಟ್ಸ್‌ ಬರುವುದು ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ.

ಮಹಿಳೆಯ ಸಾವಿನ ಬಳಿಕ ಆರೋಗ್ಯ ಇಲಾಖೆ ತುರ್ತು ತಡೆ ಕ್ರಮಗಳನ್ನು ಕೈಗೊಂಡಿದೆ. ಅವರೊಂದಿಗೆ ಕೆಲಸ ಮಾಡುತ್ತಿದ್ದ ಸುಮಾರು 20 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆಲ್ಲಿಕುಳಿ ಪಂಚಾಯಿತಿ ವ್ಯಾಪ್ತಿಯ ಬಾವಿಗಳು ಸೇರಿದಂತೆ ವಿವಿಧ ಜಲಮೂಲಗಳಿಗೆ ಸೂಪರ್‌ ಕ್ಲೋರಿನೇಷನ್‌ ಮಾಡಲಾಗಿದೆ. ಅಸುರಕ್ಷಿತ ಅಥವಾ ನಿಂತ ನೀರಿನಲ್ಲಿ ಸ್ನಾನ ಮತ್ತು ಈಜುವುದನ್ನು ತಪ್ಪಿಸಬೇಕು ಎಂದು ಎರ್ನಾಕುಲಂ ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ. ಆರ್‌. ಶಾಹಿರ್ಶಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಕೇರಳ ಆರೋಗ್ಯ ಇಲಾಖೆ ಚೆನ್ನೈನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ಸಹಯೋಗದಲ್ಲಿ ಅಮೀಬಿಕ್ ಎನ್ಸೆಫಾಲಿಟಿಸ್‌ ಪ್ರಕರಣಗಳ ಕುರಿತು ಅಧ್ಯಯನ ಆರಂಭಿಸಿತ್ತು. 2025ರ ಅಕ್ಟೋಬರ್‌ 25ರವರೆಗೆ ಕೇರಳದಲ್ಲಿ ಈ ಸೋಂಕಿನಿಂದ 30 ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮುಂಚಿತವಾಗಿ ರೋಗ ಪತ್ತೆ ಮತ್ತು ತ್ವರಿತ ಚಿಕಿತ್ಸೆಯಿಂದ ರಾಜ್ಯದಲ್ಲಿ ಸಾವಿನ ಪ್ರಮಾಣವನ್ನು ಶೇ.20ರಿಂದ 24ರೊಳಗೆ ನಿಯಂತ್ರಿಸಲು ಸಾಧ್ಯವಾಗಿದೆ. ಇದು ಜಾಗತಿಕ ಸರಾಸರಿ ಶೇ.95ಕ್ಕಿಂತ ಕಡಿಮೆ ಎಂದು ಇಲಾಖೆ ಹೇಳಿದೆ.

ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಅಮೀಬಾ ಪತ್ತೆಹಚ್ಚುವ ಸೌಲಭ್ಯವಿದೆ. ತಿರುವನಂತಪುರಂ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಕಳೆದ ವರ್ಷದಿಂದ ಅಮೀಬಾ ಸೋಂಕು ಪತ್ತೆಹಚ್ಚುವ ವಿಶೇಷ ಪರೀಕ್ಷಾ ಸೌಲಭ್ಯವನ್ನೂ ಸ್ಥಾಪಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries