HEALTH TIPS

ಪೆರ್ಣೆಯಲ್ಲಿ ತ್ಯಾಜ್ಯ ಎಸೆತ: ಕಾಸರಗೋಡಿನ ಮೂವಿಮ್ಯಾಕ್ಸ್ ಥಿಯೇಟರ್‍ಗೆ 10,000 ರೂ. ದಂಡ


ಕುಂಬಳೆ
: ನಾಯ್ಕಾಪು ಪೆರ್ಣೆ ಸಿದ್ಧಿಬೈಲಲ್ಲಿ ಎಸೆದ ತ್ಯಾಜ್ಯವನ್ನು ಅದರ ವಾರಸುದಾರರನ್ನು ಪತ್ತೆಹಚ್ಚಿ ಅವರ ಮೂಲಕ ಅದನ್ನು ತೆರವುಗೊಳಿಸಲಾಯಿತು. ಜೊತೆಗೆ ಅವರಿಗೆ 10,000 ರೂ. ದಂಡ ಹೇರಲಾಗಿದೆ.

27 ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತ್ಯಾಜ್ಯಗಳನ್ನು ತುಂಬಿಸಿ ಲಾರಿಯಲ್ಲಿ ತಂದು ಪೆರ್ಣೆಯ ಪಿ.ಜಿ. ಗೋವಿಂದ ಎಂಬವರ ತೋಟಕ್ಕಿರುವ ದಾರಿಯಲ್ಲಿ ಉಪೇಕ್ಷಿಸಲಾಗಿತ್ತು. ಈ ಕುರಿತು ಪುತ್ತಿಗೆ ಗ್ರಾಮ ಪಂಚಾಯತಿ ಹಾಗೂ ಪೋಲೀಸರಿಗೆ ಗೋವಿಂದ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತಲುಪಿದ ಪಂಚಾಯತಿ ಅಧಿಕಾರಿಗಳು ಗೋಣಿಚೀಲಗಳನ್ನು ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ  ಕಾಸರಗೋಡಿನ ಮೂವಿಮ್ಯಾಕ್ಸ್ ಟಾಕೀಸ್‍ನ ಟಿಕೆಟ್‍ನ ಕೌಂಟರ್ ಫೈಲ್‍ಗಳು ಹಾಗೂ ಅದಕ್ಕೆ ಹೊಂದಿಕೊಂಡಿರುವ ಚಹಾದಂಗಡಿ, ಹೋಟೆಲ್‍ನ ಪ್ಲಾಸ್ಟಿಕ್ ಪಾತ್ರೆಗಳು, ಲೋಟಗಳು, ಆಹಾರದ ಅವಶಿಷ್ಟಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೂವಿಮ್ಯಾಕ್ಸ್ ಟಾಕೀಸ್‍ನ ಸಂಬಂಧಪಟ್ಟವರನ್ನು ಸಂಪರ್ಕಿಸಲಾಯಿತು. ಅವರನ್ನು ಸ್ಥಳಕ್ಕೆ ಕರೆಸಿ ತ್ಯಾಜ್ಯಗಳನ್ನು ಮರಳಿ ತೆಗೆಸಿದ ಬಳಿಕ ಕಾಸರಗೋಡಿನ ತ್ಯಾಜ್ಯವನ್ನು ಪೆರ್ಣೆಗೆ ತಂದು ಉಪೇಕ್ಷಿಸಿದ ಆರೋಪದಂತೆ 10,000 ರೂ. ದಂಡ ವಸೂಲು ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries