ಅಲ್ಲದೆ, ಈ ವಿದ್ಯಾರ್ಥಿಯ 12ನೇ ತರಗತಿಯ ಸುಧಾರಣಾ ಪರೀಕ್ಷೆಯ ಫಲಿತಾಂಶವನ್ನು ತಕ್ಷಣವೇ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಮನಮೋಹನ್ ಹಾಗೂ ವಿಜಯ್ ಬಿಷ್ಣೋಯಿ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದ್ದು, ಇದು ಅರ್ಜಿದಾರನ ವೃತ್ತಿಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದೆ.
'ಇದು ಮಗುವಿನ ವೃತ್ತಿಜೀವನದ ಪ್ರಶ್ನೆಯಾಗಿದೆ. ಫಲಿತಾಂಶ ವಿಳಂಬವಾದರೆ ಆತ ಪ್ರವೇಶಾತಿಯ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳಬಹುದು. ಯಾವುದೇ ಕಾರಣವಿದ್ದರೂ, ಹಗಲಿರುಳು ಶ್ರಮಿಸಿ ಸಮಸ್ಯೆ ಬಗೆಹರಿಸಿ' ಎಂದು CBSE ಪರ ವಕೀಲರಿಗೆ ಸೂಚನೆಗಳನ್ನು ಪಡೆದುಕೊಳ್ಳುವಂತೆ ನಿರ್ದೇಶಿಸುವ ವೇಳೆ ಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
ಹಲವು ಗಲ್ಫ್ ರಾಷ್ಟ್ರಗಳಲ್ಲಿ ಪರೀಕ್ಷೆಗಳು ರದ್ದಾದ ಹಿನ್ನೆಲೆಯಲ್ಲಿ ಬಾಧಿತ ವಿದ್ಯಾರ್ಥಿಗಳಿಗಾಗಿ ಮೌಲ್ಯಮಾಪನ ಯೋಜನೆ ರೂಪಿಸಲಾಗಿದ್ದರೂ, ತನ್ನ ಫಲಿತಾಂಶವನ್ನು ಪ್ರಕಟಿಸುವಲ್ಲಿ CBSE ವಿಫಲವಾಗಿದೆ ಎಂದು ಪ್ರಶ್ನಿಸಿ ಪ್ರಾಂಶು ಜಿಗರ್ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಫಲಿತಾಂಶ ಪ್ರಕಟಿಸದಿರುವುದು ತನ್ನ ಉನ್ನತ ಶಿಕ್ಷಣದ ಭವಿಷ್ಯವನ್ನು ಅಪಾಯಕ್ಕೆ ದೂಡಿದ್ದು, ಪ್ರವೇಶಾತಿ ಅವಕಾಶಗಳಿಂದ ವಂಚಿತಗೊಳಿಸಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದಿಂದ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಿದ ಕಾರಣ, ಬಹ್ರೈನ್, ಇರಾನ್, ಕುವೈತ್, ಒಮಾನ್, ಖತರ್, ಸೌದಿ ಅರೇಬಿಯಾ ಹಾಗೂ ಯುಎಇ ಸೇರಿದಂತೆ ಏಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ CBSE 12ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ರದ್ದುಪಡಿಸಿತ್ತು.

