HEALTH TIPS

16 ಔಷಧಗಳ ಉತ್ಪಾದನೆ, ಮಾರಾಟ, ವಿತರಣೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: 'ಸ್ಥಿರ ಡೋಸ್ ಸಂಯೋಜನೆ' (ಎಫ್‌ಡಿಸಿ) ಒಳಗೊಂಡ 16 ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಈ ಔಷಧಗಳನ್ನು ನಿರಂತರವಾಗಿ ಬಳಸುವುದರಿಂದ ಆಗುವ ಅನುಕೂಲಕ್ಕಿಂತ ಹಾನಿಯೇ ಹೆಚ್ಚು' ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

'ಸಾರ್ವಜನಿಕರ ಆರೋಗ್ಯದ ಸುರಕ್ಷತೆ ಹಾಗೂ ಪರಿಣಾಮಕಾರಿ ಮತ್ತು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ ಔಷಧಗಳು ಮಾತ್ರ ಬಳಕೆಗೆ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಔಷಧಗಳನ್ನು ನಿಷೇಧಿಸಲಾಗಿದೆ. ಎಲ್ಲ ರಾಜ್ಯಗಳ ಔಷಧ ನಿಯಂತ್ರಕರು, ನಿಯಂತ್ರಕ ಸಂಸ್ಥೆಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು' ಎಂದು ತಿಳಿಸಿದೆ.

'ಚರ್ಮರೋಗ, ನೋವು ನಿವಾರಕ, ಸ್ನಾಯು ಸಡಿಲಗೊಳಿಸುವ ಮತ್ತು ಪ್ರತಿಜೀವಕ ಆಧಾರಿತ ಸಂಯೋಜನೆಗಳನ್ನು ಒಳಗೊಂಡ 16 ಔಷಧಗಳನ್ನು ಗುರುತಿಸಲಾಗಿದ್ದು, ತಕ್ಷಣದಿಂದಲೇ ದೇಶದಾದ್ಯಂತ ಬಳಕೆಗೆ ನಿಷೇಧಿಸಲಾಗಿದೆ' ಎಂದು ಅದು ತಿಳಿಸಿದೆ.

ವಿವಿಧ ಔಷಧಗಳ ಸಂಯೋಜನೆ, ಅವುಗಳ ವೈಜ್ಞಾನಿಕ ಪ್ರಮಾಣೀಕರಣ ಮತ್ತು ಸಂಭವನೀಯ ಹಾನಿಯ ಕುರಿತು ಪರೀಕ್ಷಿಸಲು ಔಷಧಗಳ ತಾಂತ್ರಿಕ ಸಲಹಾ ಮಂಡಳಿಯು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿತ್ತು. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಸಾರ ಕೈಗೊಂಡ ಎಫ್‌ಡಿಸಿಗಳ ಪರಿಶೀಲನೆಯ ಬಳಿಕ ಸಚಿವಾಲಯವು ಈ ನಿರ್ಧಾರ ಪ್ರಕಟಿಸಿದೆ.

ಎಫ್‌ಡಿಸಿ ಎಂದರೇನು?: ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ಸ್ಥಿರ ಸಂಯೋಜನೆಯನ್ನು ಹೊಂದಿರುವ ಔಷಧಗಳನ್ನು ಎಫ್‌ಡಿಸಿ ಎನ್ನಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries