HEALTH TIPS

'ಇಂಡಿಯಾ' ಬದಲಿಗೆ 'ಭಾರತ' ಪದ: ಛತ್ತೀಸ್‌ಗಢದ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಧಾರ

ಬಿಲಾಸಪುರ: ಛತ್ತೀಸ್‌ಗಢದ ಬಿಲಾಸಪುರದಲ್ಲಿರುವ ಗುರು ಘಾಸಿದಾಸ್ ಕೇಂದ್ರೀಯ ವಿಶ್ವವಿದ್ಯಾಲಯವು, ತನ್ನ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣ ಪತ್ರಗಳು ಸೇರಿದಂತೆ ಎಲ್ಲ ಅಧಿಕೃತ ದಾಖಲೆಗಳಲ್ಲಿ 'ಇಂಡಿಯಾ' ಪದವನ್ನು 'ಭಾರತ' ಎಂದು ಬದಲಾಯಿಸಲು ನಿರ್ಧರಿಸಿದೆ. 

ಈ ಕುರಿತ ನಿರ್ಣಯವನ್ನು ವಿಶ್ವವಿದ್ಯಾಲಯದ ಸ್ಥಾಯಿ ಸಮಿತಿಯು 6 ತಿಂಗಳ ಹಿಂದೆಯೇ ಅಂಗೀಕರಿಸಿದೆ ಎಂದು ಕುಲಪತಿ ಅಲೋಕ್‌ ಕುಮಾರ್‌ ಚಕ್ರವಾಲ್ ತಿಳಿಸಿದ್ದಾರೆ.

ಸದ್ಯ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕ್ರಮವಾಗಿ 'ಭಾರತ' ಮತ್ತು 'ಇಂಡಿಯಾ' ಎಂದಿದೆ. ಇಂಗ್ಲಿಷ್‌ ಸಾಲಿನಲ್ಲಿರುವ 'ಇಂಡಿಯಾ'ವನ್ನು 'ಭಾರತ' ಎಂದು ಬದಲಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

2023ರಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ 'ಭಾರತ' ಎಂದು ಬಳಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries