HEALTH TIPS

ಬದಿಯಡ್ಕ ಗ್ರಾಮ ಪಂಚಾಯಿತಿ `ಮನ್ಸೂನ್ ಮತ್ಸ್ಯ ಸಮೃದ್ಧಿ 2026'- ಮೀನು ಕೊಯ್ಲು ಉದ್ಘಾಟನೆ

ಬದಿಯಡ್ಕ: ಕೇರಳ ಸರ್ಕಾರದ ಮೀನುಗಾರಿಕಾ ಇಲಾಖೆಯು ಕಾಸರಗೋಡು ಜಿಲ್ಲೆಯಲ್ಲಿ `ಮನ್ಸೂನ್ ಮತ್ಸ್ಯ ಸಮೃದ್ಧಿ 2026' ಅನ್ನು ಆಯೋಜಿಸಿದೆ. ಟ್ರೋಲಿಂಗ್ (ಮೀನುಗಾರಿಕೆ ನಿಷೇಧ) ಅವಧಿಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಮೀನುಗಳನ್ನು ಲಭ್ಯವಾಗಿಸುವ ಭಾಗವಾಗಿ ಬದಿಯಡ್ಕ ಪಂಚಾಯಿತಿ ನೀರ್ಚಾಲು ವಾರ್ಡು ಪಾಡಲಡ್ಕದ ಸೋಫಿಯಾ ಎಂಬ ಮಹಿಳಾ ರೈತರ ತಿಲಾಪಿಯಾ ಮೀನು ಕೊಯ್ಲು ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಅವರು ಉದ್ಘಾಟಿಸಿದರು. 


ಈ ಸಂದರ್ಭದಲ್ಲಿ ಅವರು ಮಾತನಾಡಿ ಮಹಿಳೆಯರೂ ಸ್ವಾವಲಂಬಿಗಳಾಗಿ ಬದುಕಬಲ್ಲರು ಎಂಬುದನ್ನು ಸೋಫಿಯಾ ತೋರಿಸಿಕೊಟ್ಟಿದ್ದಾರೆ. ಜೇನುಸಾಕಣೆ, ಆಡು, ಕೋಳಿ, ಪಶುಸಾಕಣೆ ಮೊದಲಾದ ಎಲ್ಲಾ ವಲಯಗಳಲ್ಲಿಯೂ ಈ ಕುಟುಂಬವು ತೊಡಗಿಕೊಂಡು ಮಾದರಿ ಜೀವನವನ್ನು ನಡೆಸುತ್ತಿದ್ದಾರೆ ಎಂದರು. ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., 3ನೇ ವಾರ್ಡ್ ಸದಸ್ಯ ಶ್ಯಾಮಪ್ರಸಾದ್ ಸರಳಿ,  ಸಿಡಿಎಸ್ ಅಧ್ಯಕ್ಷೆ ಸುಲೋಚನಾ, ಸಹಾಯಕ ಮೀನುಗಾರಿಕಾ ವಿಸ್ತರಣಾಧಿಕಾರಿ ಪ್ರಮೀಳಾ ಮತ್ತು ಮೀನುಗಾರಿಕಾ ಅಕ್ವಾಕಲ್ಚರ್ ಪ್ರಮೋಟರ್ ರಶ್ಮಿ ಉಪಸ್ಥಿತರಿದ್ದರು. ಸೋಫಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries