HEALTH TIPS

23 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿಯ ಮೊದಲ ಹಂತ ಪೂರ್ಣ : ಮಾಹಿತಿ ನೀಡಿದ ಸರ್ಕಾರ

 ನವದೆಹಲಿ: 2027ರ ಜನಗಣತಿಯ ಮೊದಲ ಹಂತವಾದ ಮನೆಗಳನ್ನು ಪಟ್ಟಿ ಮಾಡುವುದು ಮತ್ತು ವಸತಿ ಗಣತಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣಗೊಂಡಿದೆ ಎಂದು ಸರ್ಕಾರ ಮಂಗಳವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.


ಕೇರಳ ಮತ್ತು ನಾಗಾಲ್ಯಾಂಡ್‌ನಲ್ಲಿ 15 ದಿನಗಳ ಸ್ವಯಂ-ಮಾಹಿತಿ ದಾಖಲಾತಿ (ಸೆಲ್ಫ್-ಎನ್ಯೂಮರೇಷನ್) ಪ್ರಕ್ರಿಯೆ ಈಗ ನಡೆಯುತ್ತಿದೆ.

ಇದರ ಬಳಿಕ, ಜುಲೈ 1 ರಿಂದ ಜುಲೈ 30 ರವರೆಗೆ ಕ್ಷೇತ್ರ ಕಾರ್ಯಚರಣೆ ನಡೆಯಲಿದೆ ಎಂದು ಅದು ಹೇಳಿದೆ.

ಕ್ಷೇತ್ರ ಕಾರ್ಯಚರಣೆಗಳು ಮಂಗಳವಾರ ಹಿಮಾಚಲ ಪ್ರದೇಶದಲ್ಲಿ ಆರಂಭವಾಗಿದೆ ಹಾಗೂ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪುದುಚೇರಿ ಮತ್ತು ಉತ್ತರ ಪ್ರದೇಶಗಳಲ್ಲಿ ಈಗಾಗಲೇ ಪ್ರಗತಿಯಲ್ಲಿವೆ.

''ಸ್ವಯಂ-ಮಾಹಿತಿ ದಾಖಲಾತಿಯನ್ನು ಪೂರ್ಣಗೊಳಿಸಿರುವ ನಿವಾಸಿಗಳು ತಮಗೆ ಲಭಿಸಿರುವ 'ಸ್ವಯಂ-ಮಾಹಿತಿ ದಾಖಲಾತಿ ಐಡಿ'ಯನ್ನು ಸಿದ್ಧವಾಗಿಟ್ಟುಕೊಂಡು, ಕ್ಷೇತ್ರ ಭೇಟಿಗೆ ಬರುವ ಗಣತಿದಾರರಿಗೆ ನೀಡಲು ವಿನಂತಿಸಲಾಗಿದೆ. ಸ್ವಯಂ-ಮಾಹಿತಿ ದಾಖಲಾತಿಯನ್ನು ಆಯ್ಕೆ ಮಾಡಿಕೊಳ್ಳದ ಕುಟುಂಬಗಳ ಮನೆಗಳಿಗೆ ಗಣತಿದಾರರು ಖುದ್ದಾಗಿ ಭೇಟಿ ನೀಡಲಿದ್ದಾರೆ'' ಎಂದು ಪ್ರಕಟನೆ ತಿಳಿಸಿದೆ.

ಸ್ವಾತಂತ್ರ್ಯಾ ನಂತರದ ಎಂಟನೇ ಜನಗಣತಿಯನ್ನು 11,718 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತವನ್ನು 'ಮನೆ ಪಟ್ಟಿ ಮತ್ತು ವಸತಿ ಗಣತಿ' ಎಂದು ಕರೆದರೆ, ಎರಡನೇ ಹಂತವನ್ನು 'ಜನಸಂಖ್ಯಾ ಗಣತಿ' ಎಂದು ಕರೆಯಲಾಗುತ್ತದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries