HEALTH TIPS

Whatsapp Plus: Free ವಾಟ್ಸಾಪ್ ಯುಗ ಮುಗೀತಾ? ಭಾರತದಲ್ಲಿ ಮೆಟಾ ವೆರಿಫೈಡ್ ಸಬ್‌ಸ್ಕ್ರಿಪ್ಷನ್! ಒಂದು ತಿಂಗಳಿಗೆ ಬೆಲೆ ಎಷ್ಟು ಗೊತ್ತಾ?

Whatsapp Plus: ವಾಟ್ಸಾಪ್ ಬಳಸುವ ಕೋಟ್ಯಂತರ ಭಾರತೀಯರಿಗೆ ಮೆಟಾ ಮತ್ತೊಂದು ಹೊಸ ಸುದ್ದಿ ಕೊಟ್ಟಿದೆ. ಜನಪ್ರಿಯ ಮೆಸೇಜಿಂಗ್ ಆಪ್‌ನಲ್ಲಿ ಈಗ ವಾಟ್ಸಾಪ್ ಪ್ಲಸ್ ಎಂಬ ಚಂದಾದಾರಿಕೆ ಸೇವೆ ಅಧಿಕೃತವಾಗಿ ಭಾರತದಲ್ಲಿ ಆರಂಭವಾಗಿದೆ. ಆ ಕುರಿತ ವರದಿ ಇಲ್ಲಿದೆ. 


Whatsapp Plus: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ವಾಟ್ಸಾಪ್ (Whatsapp) ನೋಡದೆ ಇರಲು ಆಗುತ್ತಾ? ಗುಡ್ ಮಾರ್ನಿಂಗ್ ಮೆಸೇಜ್‌ನಿಂದ (Message) ಹಿಡಿದು ಆಫೀಸ್ ಫೈಲ್ ತನಕ ಎಲ್ಲದಕ್ಕೂ ವಾಟ್ಸಾಪ್‌ ಗತಿ. ಇಷ್ಟು ವರ್ಷ ಒಂದು ರೂಪಾಯಿ ಕೊಡದೆ ಫುಲ್ ಫ್ರೀ ಆಗಿ ಯೂಸ್ ಮಾಡುತ್ತಿದ್ದೆವು. ಆದರೆ ಈಗ ಮೆಟಾ ಸರ್‌ಪ್ರೈಸ್ ಕೊಟ್ಟಿದೆ – ಅದುವೇ, ಭಾರತಕ್ಕೂ ವಾಟ್ಸಾಪ್ ಸಬ್‌ಸ್ಕ್ರಿಪ್ಷನ್ (Whatsapp asaubscription) ಬಂದ್ಬಿಟ್ಟಿದೆ! ಅಯ್ಯೋ, ಇನ್ನು ಮುಂದೆ ಚಾಟ್ ಮಾಡೋಕೂ ದುಡ್ಡು ಕೊಡಬೇಕಾ? ಅಂತ ಗಾಬರಿ ಆಗಬೇಡಿ. ಇದು ಎಲ್ಲರಿಗೂ ಕಡ್ಡಾಯ ಅಲ್ಲ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ತರ ವಾಟ್ಸಾಪ್‌ಗೂ ಮೆಟಾ ವೆರಿಫೈಡ್ ಪ್ಲಾನ್ ಬಂದಿದೆ. ಬ್ಲೂ ಟಿಕ್ ಬೇಕು, ಬಿಸಿನೆಸ್ ರೀಚ್ ಜಾಸ್ತಿ ಆಗಬೇಕು, ಇಂಪರ್ಸನೇಶನ್ನಿಂದ ಪ್ರೊಟೆಕ್ಷನ್ ಬೇಕು ಅನ್ನೋರಿಗೆ ಮಾತ್ರ ಈ ಪೇಯ್ಡ್ ಸರ್ವಿಸ್. ಸಾಮಾನ್ಯ ಹಾಯ್, ಹಲೋ ಚಾಟ್ ಮಾಡುವ ನಿಮಗೆ ಈಗಲೂ ಫ್ರೀನೇ. ಆದರೆ ದುಡ್ಡು ಕೊಟ್ಟರೆ ಏನೆಲ್ಲ ಎಕ್ಸ್‌ಟ್ರಾ ಸಿಗುತ್ತೆ? ತಿಂಗಳ ಬಿಲ್ ಎಷ್ಟು? ಸಣ್ಣ ಅಂಗಡಿ, ಬಿಸಿನೆಸ್ ಮಾಡುವವರಿಗೆ ಲಾಭನಾ? ಬನ್ನಿ, ವಾಟ್ಸಾಪ್ ಅಪ್ಡೇಟ್​ (Whatsapp Update) ಕುರಿತು ಸಂಪೂರ್ಣ ಮಾಹಿತಿ ನೋಡೋಣ:

ಏನಿದು ವಾಟ್ಸಾಪ್ ಪ್ಲಸ್?

ವಾಟ್ಸಾಪ್ ಪ್ಲಸ್ ಎನ್ನುವುದು ಹೆಚ್ಚುವರಿ ವೈಯಕ್ತಿಕವಾದ ಕೆಲವೊಂದು ವೈಶಿಷ್ಟ್ಯಗಳನ್ನು ಬಯಸುವವರಿಗಾಗಿ ತಂದಿರುವ ಚಂದಾದಾರಿಕೆಯಾಗಿದೆ. ಇದು ಮೂಲ ವಾಟ್ಸಾಪ್​ಗೆ ಪರ್ಯಾಯವಲ್ಲ, ಬದಲಾಗಿ ಪ್ರೀಮಿಯಂ ಅನುಭವ ನೀಡುವ ಆಡ್-ಆನ್ ಆಗಿದೆ. ಹೌದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಆವೃತ್ತಿಗಳಲ್ಲಿ ಇದು ಲಭ್ಯವಿದ್ದು ಸೆಟ್ಟಿಂಗ್ಸ್‌ನಲ್ಲಿ ನೇರವಾಗಿ ಆಕ್ಟಿವೇಟ್ ಮಾಡಿಕೊಳ್ಳಬಹುದು.

ಒಂದು ತಿಂಗಳಿಗೆ ಇದರ ಬೆಲೆ ಎಷ್ಟು?

ಭಾರತದಲ್ಲಿ ವಾಟ್ಸಾಪ್ ಪ್ಲಸ್ ಬೆಲೆಯನ್ನು ತಿಂಗಳಿಗೆ 79 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಮೊದಲ ಬಾರಿ ಚಂದಾದಾರರಾಗುವವರಿಗೆ ಒಂದು ತಿಂಗಳ ಉಚಿತ ಪ್ರಯೋಗ ಸಿಗಲಿದೆ. ಅದರಂತೆ, ಉಚಿತ ಅವಧಿ ಮುಗಿದ ನಂತರ ಬಳಕೆದಾರರು ರದ್ದು ಮಾಡದಿದ್ದರೆ ಪ್ರತಿ ತಿಂಗಳು ಬ್ಯಾಂಕ್ ಖಾತೆ ಅಥವಾ ಯುಪಿಐ ಮೂಲಕ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತದೆ. ಏತನ್ಮಧ್ಯೆ, ಬೇಕಾದಾಗ ಯಾವುದೇ ಸಮಯದಲ್ಲಿಯೂ ಚಂದಾದಾರಿಕೆಯನ್ನು ನಿಲ್ಲಿಸಬಹುದು. ಜೊತೆಗೆ ಬೇಕಿದ್ದರೆ, ಅದನ್ನು ಮತ್ತೆ ರಿಯಾಕ್ಟಿವ್​ ಮಾಡಿಕೊಳ್ಳಬಹುದು.

ಪ್ರೀಮಿಯಂ ವೈಶಿಷ್ಟ್ಯ ಏನು?

ವಾಟ್ಸಾಪ್ ಪ್ಲಸ್ ಚಂದಾದಾರರಿಗೆ ಹಲವು ವಿಶೇಷ ಸೌಲಭ್ಯಗಳು ದೊರೆಯಲಿವೆ.

ಮೊದಲನೆಯದಾಗಿ ಅಪ್ಲಿಕೇಶನ್ ಥೀಮ್ ಬದಲಾಯಿಸುವ ಆಯ್ಕೆ ಸಿಗುತ್ತದೆ. ವಾಟ್ಸಾಪ್ ಐಕಾನ್ ಬಣ್ಣವನ್ನು ಕೂಡ ನಿಮ್ಮ ಇಷ್ಟಕ್ಕೆ ಬದಲಾಯಿಸಬಹುದು.

ಎರಡನೆಯದಾಗಿ ಪ್ರತಿ ಚಾಟ್‌ಗೆ ಪ್ರತ್ಯೇಕ ರಿಂಗ್ಟೋನ್ ಹೊಂದಿಸಲು ಸಾಧ್ಯವಾಗುತ್ತದೆ. ಕುಟುಂಬ, ಸ್ನೇಹಿತರು, ಆಫೀಸ್ ಗ್ರೂಪ್‌ಗೆ ಬೇರೆ ಬೇರೆ ಟೋನ್ ಇಡಬಹುದು.

ಮೂರನೆಯದಾಗಿ ಸಾಮಾನ್ಯವಾಗಿ 3 ಚಾಟ್ ಮಾತ್ರ ಪಿನ್ ಮಾಡಲು ಸಾಧ್ಯವಿದ್ದ ಸ್ಥಳದಲ್ಲಿ ಈಗ 20 ಚಾಟ್‌ಗಳನ್ನು ಪಿನ್ ಮಾಡಬಹುದು.

ನಾಲ್ಕನೆಯದಾಗಿ AI ರಚಿತ ಎಮೋಜಿಗಳು, ವಿಶೇಷ ಸ್ಟಿಕ್ಕರ್ ಪ್ಯಾಕ್‌ಗಳು ಮತ್ತು ಕಸ್ಟಮ್ ಚಾಟ್ ಪಟ್ಟಿಯ ವಿನ್ಯಾಸ ಲಭ್ಯವಾಗಲಿದೆ. ಇದು ಚಾಟಿಂಗ್ ಅನುಭವವನ್ನು ಹೆಚ್ಚು ವೈಯಕ್ತಿಕಗೊಳಿಸುತ್ತದೆ.

ಸಾಮಾನ್ಯ ಬಳಕೆದಾರರಿಗೆ ಏನಾದರೂ…?

ಮೆಟಾ ಸ್ಪಷ್ಟವಾಗಿ ಹೇಳಿರುವಂತೆ ವಾಟ್ಸಾಪ್ ಪ್ಲಸ್ ಸಂಪೂರ್ಣವಾಗಿ ಐಚ್ಛಿಕ. ಅಂದರೆ, ದುಡ್ಡು ಕೊಟ್ಟವರಿಗೆ ಮಾತ್ರ! ಹಾಗಾಗಿ, ಅದರ ಚಂದಾದಾರರಾಗದವರಿಗೆ ಮೆಸೇಜ್ ಕಳುಹಿಸುವುದು, ಕರೆ ಮಾಡುವುದು, ಸ್ಟೇಟಸ್ ಹಾಕುವುದು, ಗ್ರೂಪ್ ಬಳಸುವುದು ಸೇರಿದಂತೆ ಎಲ್ಲಾ ಸಾಮಾನ್ಯ ಉಚಿತ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

ಚಂದಾದಾರಿಕೆ ಪಡೆಯುವುದು ಹೇಗೆ?

ವಾಟ್ಸಾಪ್ ತೆರೆಯಿರಿ, ಬಲ ಮೇಲ್ಭಾಗದ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿ ಕಾಣುವ ಚಂದಾದಾರಿಕೆ ಅಥವಾ Whatsapp Plus  ಆಯ್ಕೆಯನ್ನು ಆರಿಸಿ. ಬೆಲೆ ಮತ್ತು ವೈಶಿಷ್ಟ್ಯಗಳನ್ನು ಓದಿದ ನಂತರ ಒಂದು ತಿಂಗಳ ಉಚಿತ ಪ್ರಯೋಗ ಆರಂಭಿಸುವ ಬಟನ್ ಒತ್ತಿ. ಪೇಮೆಂಟ್ ವಿಧಾನ ಸೇರಿಸಿದ ನಂತರ ಸೇವೆ ಆಕ್ಟಿವೇಟ್ ಆಗುತ್ತದೆ. ಬೇಕಾದಾಗ ಅದೇ ಮೆನುವಿನಿಂದ ರದ್ದು ಮಾಡಬಹುದು.

ಒಟ್ಟಾರೆಯಾಗಿ, ವಾಟ್ಸಾಪ್ ಪ್ಲಸ್ ಮೂಲಕ ಮೆಟಾ ಬಳಕೆದಾರರಿಗೆ ಹೆಚ್ಚಿನ ಆಯ್ಕೆ ನೀಡಲು ಹೊರಟಿದೆ. 79 ರೂಪಾಯಿ ಬೆಲೆಯಲ್ಲಿ ಥೀಮ್, ರಿಂಗ್ಟೋನ್ ಮತ್ತು AI ಎಮೋಜಿ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಆದರೆ ಉಚಿತ ಬಳಕೆದಾರರಿಗೆ ಯಾವುದೇ ಒತ್ತಡವಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ ಮತ್ತು ಚಾಟಿಂಗ್ ಅನುಭವವನ್ನು ಇನ್ನಷ್ಟು ಖುಷಿಯಾಗಿಸಿ. 






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries