ಕಾಸರಗೋಡು: ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರು ಮುಂಬಯಿಯ ಅಂಧೇರಿ ಕರ್ನಾಟಕ ಸಂಘ ಕೊಡಮಾಡುವ 'ನಿರೂಪಣಾ ಕೌಸ್ತುಭ' ಪ್ರಶಸ್ತಿಗೆ ಆಐಕೆಯಾಘಿದ್ದಾರೆ. ನಿರೂಪಣಾ ಕ್ಷೇತ್ರದ ಅವರ ಬಹುಮುಖ ಸಾಧನೆ, ಸಾಮಥ್ರ್ಯವನ್ನು ಪರಿಗಣಿಸಿ ಈ ಪ್ರಶಸ್ತಿ ಘೋಷಿಸಿದೆ. ಜೂನ್28 ರಂದು ಅಂಧೇರಿ ಕರ್ನಾಟಕ ಸಂಘದ ಆಶ್ರಯದಲ್ಲಿ ಮುಂಬಯಿಯ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ ಹೊರನಾಡ ಕನ್ನಡ ಸಂಸ್ಕøತಿ ಸಂಭ್ರಮ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಸಂಸ್ಥಾಪಕ ಕೃಷ್ಣ.ಬಿ. ಶೆಟ್ಟಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರವಿ ನಾಯ್ಕಾಪು ಅವರು ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ 'ಸ್ನೇಹಗಂಗೆ' ಕೃತಿಯು ಈಗಾಗಲೇ ಎರಡು ಮುದ್ರಣಗಳನ್ನು ಕಂಡಿದ್ದು, ಕೃತಿಯ ಸಂಕ್ಷಿಪ್ತ ರೂಪವು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಒಳಪಟ್ಟಿರುವುದು ಗಮನಾರ್ಹವಾಗಿದೆ.
ಕಳೆದ ಎರಡೂವರೆ ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮುದ್ರಣ-ದೃಶ್ಯ ಮಾಧ್ಯಮಗಳೆರಡರಲ್ಲಿಯೂ ಸೇವೆಸಲ್ಲಿಸಿರುತ್ತಾರೆ. ಉತ್ತಮ ಉದ್ಘೋಷಕ, ಕನ್ನಡ ನಿರೂಪಕರೂ ಆಗಿರುವ ಇವರು ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಹಿತ ಅನೇಕ ಸಾಮಾಜಿಕ, ಸಾಹಿತ್ಯಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.



