ಪೆರ್ಲ: ಭಜನಾ ಮಂದಿರಗಳು ಸಂಸ್ಕøತಿ ಬೋಧನೆಯ ತಾಣಗಳಾಗಿಬದಲಾಗಬೇಕು ಎಂದು ಮಾಣಿಲ ಶ್ರೀಧಾಮದ ಪರಮಪೂಜ್ಯ ಯೋಗಿಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಗುರುವಾರ ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ಖಂಡಿಗೆ ಪೂಪಾಡಿಕಲ್ಲು ಶ್ರೀರಾಮನಗರ ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ನೂತನ ಶ್ರೀಕೃಷ್ಣ ಮಂದಿರದ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಭಕ್ತಾದಿಗಳ ಸಾಮೀಪ್ಯ ಮತ್ತು ಸ್ವಾರ್ಥರಹಿತ ಸೇವೆಗಳಿಂದ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಭಜನಾಮಂದಿರ ನಿರ್ಮಾಣಕಾರ್ಯವನ್ನು ತಪಸ್ಸಿನಂತೆ ಕೈಗೊಂಡಾಗ ನಿರ್ಮಾಣಕಾರ್ಯ ಶೀಘ್ರ ಪೂರೈಸಲು ಸಾಧ್ಯ. ಇದಕ್ಕಾಗಿ ನಾಡಿನ ಜನತೆ ಒಂದಷ್ಟು ತ್ಯಾಗದ ಮನೋಭಾವ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಮಂದಿರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಯುಎಇ ಮನಿ ಎಕ್ಸ್‍ಚೇಂಜ್ ನಿವೃತ್ತ ಸಿಓಓ ಸುಧೀರ್ ಕುಂಆರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವ ಸಲಹೆಗಾರ ಶುಳುವಾಲಮೂಲೆ ಶಿವಸುಬ್ರಹ್ಮಣ್ಯ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಅಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಖಂಡಿಗೆ, ಕೋಶಾಧಿಕಾರಿ ಉದಯಚೆಟ್ಟಿಯಾರ್ ಬಜಕೂಡ್ಲು, ಮಂದಿರ ಸಮಿತಿ ಗೌರವಾಧ್ಯಕ್ಷ ಕೃಷ್ಣ ಭಟ್ ಖಂಡಿಗೆ, ಅಧ್ಯಕ್ಷ ಸುಬ್ರಾಯ ನಾಯಕ್ ಖಂಡಿಗೆ, ಪ್ರಧಾನ ಕಾರ್ಯದರ್ಶಿ ಪುಟ್ಟಪ್ಪ ಖಂಡಿಗೆ, ಕೋಶಾಧಿಕಾರಿ ಪುರುಷೋತ್ತಮ ನಾಯಕ್ ಖಂಡಿಗೆ ಮೊದಲಾದವು ಉಪಸ್ಥಿತರಿದ್ದರು. ಈ ಸಂದರ್ಭ ಮಂದಿರ ನಿರ್ಮಣ ಸಮಿತಿ ವತಿಯಿಂದ ಆರಂಭಿಸಲಾದ ಲಕ್ಕಿ ಡ್ರಾ ಕೂಪನ್ ಮೂಲಕ ವಿಜೇತರಾದ ರೇವತೀ ಪೆರ್ಣೆ ಅವರಿಗೆ ಮಾಣಿಲಶ್ರೀಗಳು ಬಹುಮಾನ ವಿತರಿಸಿದರು. ಡಾ. ಕಿಶೋರ್ ಕುಮಾರ್ ರೈ ಶೇಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



