ಕಾಸರಗೋಡು: ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅಮಾನುಷ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮೈಲಾಟ್ಟಿಯ ಪನಾಯಲ್ ಗ್ರಾಮದ ಕುರುಕ್ಕನ್‍ಕುನ್ನು ಕಾಲನಿ ನಿವಾಸಿ ಮಧುಸೂಧನನ್ ನಾಯರ್ (63)ಎಂಬಾತನಿಗೆ ಹೊಸದುರ್ಗ ಪೆÇೀಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಪಿ.ಎಂ. 30 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸದಿದ್ದರೆ, ಅಪರಾಧಿ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆತಿಳಿಸಲಾಗಿದೆ. 2023 ಮೇ 25ರಂದು ಘಟನೆ ನಡೆದಿದ್ದು, ಚೀಮೇನಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 11ರ ಹರೆಯದ ಬಾಲಕಿಯ ತಾಯಿ ದೇವಸ್ಥಾನಕ್ಕೆ ತೆರಳಿದ್ದಾಗ ಕೃತ್ಯ ನಡೆಸಲಾಗಿದೆ. ಬಾಲಕಿ ತನ್ನ ಕಿರಿಯ ಸಹೋದರನೊಂದಿಗೆ ಮನೆಯೊಳಗೆ ನಿದ್ರಿಸುತ್ತಿದ್ದ ಸಂದರ್ಭ ಅಪರಾಧಿ ಅತಿಕ್ರಮಿಸಿ ನುಗ್ಗಿ , ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಚೀಮೇನಿ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.

