ಕಾಸರಗೋಡು: ನಗರದ ಅಡ್ಕತ್ತಬೈಲಿನ ಕೊಳ್ಕೆಬೈಲು ಶ್ರುತಿ ನಿವಾಸದ, ಮಾಜಿ ನಗರಸಭಾ ಸದಸ್ಯ ದುಗ್ಗಪ್ಪ ಅವರ ಪತ್ನಿ ವಿಶಾಲಾಕ್ಷಿ (62)ಅವರ ಮೃತದೇಹ ಮನೆ ಸನಿಹದ ಬಾವಿಯಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ ಪತಿಯ ಜತೆ ಆಹಾರಸೇವಿಸಿ ಮಲಗಿದ್ದ ವಿಶಾಲಾಕ್ಷಿ ಅವರುಬೆಳಗಿನ ಜಾವ ಮಂಚದಲ್ಲಿ ಕಾಣದಿದ್ದಾಗ ಪತಿ ಹಾಗೂ ಮಕ್ಕಳು ಹುಡುಕಾಟ ನಡೆಸುವ ಮಧ್ಯೆ ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಸೌಖ್ಯದಿಂದ ಬಳಲುತ್ತಿದ್ದ ವಿಶಾಲಾಕ್ಷಿ ಅವರುಖಿನ್ನತೆಗೊಳಗಾಗಿದ್ದರೆನ್ನಲಾಗಿದೆ. ಅಸಹಜ ಸಾವಿನ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


