HEALTH TIPS

'ಕಾಸರಗೋಡು ಪೋರ್ಟ್ ರೈಡ್-2026': ಕಾಞಂಗಾಡಿನಿಂದ ಕುಂಬಳೆ ಆರಿಕ್ಕಾಡಿಕೋಟೆ ವರೆಗೆ ಯಶಸ್ವಿ ಬೈಸಿಕಲ್ ರೈಡ್

ಕಾಸರಗೋಡು: ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ) ಕಾಸರಗೋಡು ಮತ್ತು ಜಿಲ್ಲಾಡಳಿತ, ಕಾಸರಗೋಡು ಪೆಡಲರ್ಸ್ ಸೈಕ್ಲಿಂಗ್ ಕ್ಲಬ್, ಜಂಟಿಯಾಗಿ 'ಕಾಸರಗೋಡು ಪೋರ್ಟ್ ರೈಡ್-2026' ಎಂಬ ಪಾರಂಪರಿಕ ಬೈಸಿಕಲ್ ರೈಡನ್ನು ಆಯೋಜಿಸಲಾಯಿತು. 


ಹೊಸದುರ್ಗ ಕೋಟೆಯಿಂದ ಆರಂಭಗೊಂಡ ಸೈಕಲ್ ಸವಾರಿ, ಸುಮಾರು 70 ಕಿ.ಮೀ ಕ್ರಮಿಸಿ, ಕುಂಬಳೆಯ ಅರಿಕ್ಕಾಡಿ ಕೋಟೆಯಲ್ಲಿ ಕೊನೆಗೊಂಡಿತು.ಕಾಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಐತಿಹಾಸಿಕ ಹೊಸದುರ್ಗ ಕೋಟೆಯಿಂದ ಯಾತ್ರೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯ ಅವರ ನೇತೃತ್ವದಲ್ಲಿ ಸೈಕಲ್ ಯಾತ್ರೆ ನಡೆಯಿತು.

ಕಾಸರಗೋಡು ಪೆಡಲರ್ಸ್ ಸೈಕ್ಲಿಂಗ್ ಕ್ಲಬ್ ನೇತೃತ್ವದಲ್ಲಿ ನಡೆದ ಈ ಸವಾರಿಯಲ್ಲಿ 26 ಸೈಕಲ್ ಉತ್ಸಾಹಿಗಳು ಭಾಗವಹಿಸಿದ್ದರು. ಸೈಕ್ಲಿಂಗ್ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎ. ನಸೀಬ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಕಾರ್ಯದರ್ಶಿ ರತೀಶ್ ಅಂಬಲತ್ತರ, ಪದಾಧಿಕಾರಿಗಳಾದ ಶ್ರೀಜಿತ್ ಮತ್ತು ಶ್ರೀಕಾಂತ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಜಿಲ್ಲಾ ಸುಚಿತಾ ಮಿಷನ್ ಸಂಯೋಜಕ ಪಿ. ಜಯನ್, ಡಿಟಿಪಿಸಿ ಅಧಿಕಾರಿಗಳು ಉಪಸ್ಥಿತರಿದ್ದರು. 

ಕುಂಬಳ ಅರಿಕ್ಕಾಡಿ ಕೋಟೆ ವಠಾರದಲ್ಲಿ ಕಾಸರ್‍ಗೋಡ್ ಫೆÇೀರ್ಟ್ ರೈಡ್ 2026 ರ ಸಮಾರೋಪ ಸಮಾರಂಭ ನಡೆಯಿತು. ರ್ಯಾಲಿಯ ಆರಂಭದಿಂದ ತೊಡಗಿ, ಸಮಾರೋಪದ ವರೆಗೆ ಪೂರ್ಣ ಸಮಯ ಸೈಕಲ್ ರೈಡ್ ನಡೆಸುವ ಮೂಲಕ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಗಮನಸೆಳೆದರು. 

ಸಮಾರೋಪ ಸಮಾರಂಭದಲ್ಲಿ ಕುಂಬಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಪಿ. ಖಾದರ್, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಅಶ್ರಫ್ ಕಾರ್ಲೆ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries