HEALTH TIPS

ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕಾಸರಗೋಡು: ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಮಂದಿರಗಳಿಗೆ ಮೊದಲ ಹೆಜ್ಜೆ ಇಡುತ್ತಿರುವ ಮಕ್ಕಳನ್ನು ಸ್ವಾಗತಿಸಲು ಕಾಸರಗೋಡು ಜಿಲ್ಲೆ ಸಜ್ಜಾಗಿದೆ. ಜೂನ್ 1 ರಂದು ಸಾರ್ವಜನಿಕ  ಶಿಕ್ಷಣ ಇಲಾಖೆ  ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪ್ರವೇಶೋತ್ಸವ ಸಮಾರಂಭವನ್ನು ಕೈಕೊಟ್ಟುಕಡವಿನ ಪೂಕೋಯ ತಂಙಳ್ ಸ್ಮಾರಕ ವಿಎಚ್‍ಎಸ್ ಶಾಲೆಯಲ್ಲಿ ಆಯೋಜಿಸಲಾಗಿದೆ.


ಬೆಳಗ್ಗೆ 10ಕ್ಕೆ ಪ್ರವೇಶ ಸಮಾರಂಭದ ಅಧಿಕೃತ ಉದ್ಘಾಟನೆಯನ್ನು ವಿದ್ಯುತ್, ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸನ್ನಿ ಜೋಸೆಫ್ ಸಮಾರಂಭ ಉದ್ಘಾಟಿಸುವರು. ಶಾಸಕ ಸಂದೀಪ್ ವಾರಿಯರ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಕಲ್ಲಟ್ರ ಮಾಹಿನ್ ಮತ್ತು ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಆಯೋಜಿಸಿರುವ ಜಿಲ್ಲಾ ಮಟ್ಟದ ಪ್ರವೇಶೋತ್ಸವ ಮತ್ತು 'ಮಿಕಾವು ಉತ್ಸವಂ 26' ಜೂ. 1ರಂದು ಬೆಳಿಗ್ಗೆ 9.30 ಕ್ಕೆ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ (ಜಿಎಚ್‍ಎಸ್‍ಎಸ್) ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಸ್ವಾಗತಿಸುವುದರ ಜೊತೆಗೆ, ಜಿಲ್ಲೆಯ ಅತ್ಯುತ್ತಮ ಸಾಧಕರನ್ನು ಸನ್ಮಾನಿಸಲಾಗುವುದು. 2025-26ನೇ ಶೈಕ್ಷಣಿಕ ವರ್ಷದಲ್ಲಿ ಪ್ಲಸ್ ಟು ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಉನ್ನತ ಫಲಿತಾಂಶಗಳನ್ನು ದಾಖಲಿಸಿದ ವಿದ್ಯಾರ್ಥಿಗಳು ಮತ್ತು ಎನ್‍ಎಂಎಂಎಸ್ ಮತ್ತು ಸಿಎಂ ಕಿಡ್ಸ್ (ಎಲ್‍ಎಸ್‍ಎಸ್, ಯುಎಸ್‍ಎಸ್) ನಂತಹ ವಿದ್ಯಾರ್ಥಿವೇತನ ಪರೀಕ್ಷೆಗಳಲ್ಲಿ ಉನ್ನತ ಫಲಿತಾಂಶ ದಾಖಲಿಸಿದವರನ್ನು ಅಭಿನಂದಿಸಲಾಗುವುದು ಎಂದುಪ್ರಕಟಣೆ ತಿಳಿಸಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries