HEALTH TIPS

ಪ್ರಯಾಣದ ಮಧ್ಯೆ ಮಹಿಳೆಯ 30 ಸಾವಿರ ರೂ. ನಾಪತ್ತೆ-ಠಾಣೆಗೊಯ್ದು ಪ್ರಯಾಣಿಕರ ತಪಾಸಣೆ ನಡೆಸಿದರೂ ಪತ್ತೆಯಾಗದ ಹಣ

ಕುಂಬಳೆ: ಕೇರಳ ರಾಜ್ಯ ರಸ್ತೆಸಾರಿಗೆ ನಿಗಮ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 30 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬುಧವಾರ ಸಂಜೆ  ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಕಳವು ನಡೆದಿರುವ ಬಗ್ಗೆ ಕಾಸರಗೋಡಿನಿಂದ ಪ್ರಯಾಣಿಸಿದ ಮೊಗ್ರಾಲ್ ಪುತ್ತೂರು ನಿವಾಸಿ ದೂರು ನೀಡಿದ್ದು, ಹಣ ನಾಪತ್ತೆ ಪ್ರಕರಣದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಹೈರಾಣಾಗಬೇಕಾಯಿತು.


ಕಾಸರಗೋಡಿನಿಂದ ಹೊರಟ ಬಸ್ ಚೌಕಿಗೆ ತಲುಪಿದೊಡನೆ ಮಹಿಳೆ ಪರ್ಸ್ ಪರಿಶೀಲಿಸಿದಾಗ ಅದರಲ್ಲಿದ್ದ 30 ಸಾವಿರ ರೂಪಾಯಿ ನಾಪತ್ತೆಯಾಗಿತ್ತು.   ಈ ಬಗ್ಗೆ ಮಹಿಳೆ ಬಸ್‍ನ ನಿರ್ವಾಹಕನಲ್ಲಿ ತಿಳಿಸಿದ್ದು, ಇದರಿಂದ ಬಸ್ಸನ್ನು ನೇರ ಕುಂಬಳೆ ಪೆÇಲೀಸ್ ಠಾಣೆಗೆ ತಲುಪಿಸಲಾಗಿತ್ತು.  ಬಸ್‍ನಲ್ಲಿ ಸುಮಾರು 70ರಷ್ಟು ಮಹಿಳಾ ಪ್ರಯಾಣಿಕರು ಹಾಗೂ ಇಬ್ಬರು ಪುರುಷರಿದ್ದರು.  ಮಹಿಳಾ ಪೆÇಲೀಸರು ಎಲ್ಲಾ ಮಹಿಳಾ ಪ್ರಯಾಣಿಕರನ್ನು ತಪಾಸಣೆ ನಡೆಸಿದರೂ ಹಣ ಪತ್ತೆಯಾಗಿರಲಿಲ್ಲ.  ಸಂಜೆ 6ಕ್ಕೆ ಕಾಸರಗೋಡಿಂದ ಹೊರಟ ಬಸ್ ತಪಾಸಣಾಕಾರ್ಯ ಪೂರ್ತಿಗೊಂಡು ಕುಂಬಳೆ ಠಾಣೆಯಿಂದ ಮಂಗಳೂರಿಗೆ ಹೊರಡುವಾಗ ರಾತ್ರಿ 8ಗಂಟೆಯಾಗಿತ್ತು.

ಕಾಸರಗೋಡಿನಿಂದ ಚೌಕಿ ಮಧ್ಯೆ ಹಣ ಕಳವು ನಡೆದಿರಬಹುದೆಂದೂ, ಕಳವು ಗೈದ ವ್ಯಕ್ತಿ ಯಾವುದಾದರೂ ಸ್ಟಾಪ್‍ನಲ್ಲಿ ಇಳಿದಿರಬಹುದೆಂದು ಸಂಶಯಿಸಲಾಗಿದೆ. ಚಿನ್ನಾಭರಣವನ್ನು ಅಡವಿರಿಸಿ ಲಭಿಸಿದ ಹಣ ಸಹಿತ ಮನೆಗೆ ಮರಳುತ್ತಿದ್ದ ವೇಳೆ ಮಹಿಳೆಯ ಬ್ಯಾಗ್‍ನಲ್ಲಿದ್ದ ಹಣ ಕಳವಾಗಿದ್ದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries