ಪಟ್ನಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೂರು ದಿನಗಳ ಬಿಹಾರ ಪ್ರವಾಸ ಕೈಗೊಂಡಿದ್ದು, ಪಟ್ನಾಗೆ ಭಾನುವಾರ ಬಂದಿಳಿದರು.
ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಭಾಗವತ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಜೂನ್ 9ರವರೆಗೆ ಭಾಗವತ್ ಅವರು ಮುಂಗೆರ್‌ನಲ್ಲಿ ತಂಗಲಿದ್ದಾರೆ.
'ಮುಂಗೇರ್‌ನಲ್ಲಿ ನಡೆಯುತ್ತಿರುವ 'ಸಂಘ ಶಿಕ್ಷಾ ವರ್ಗ' ಹಾಗೂ ವಿವಿಧ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲಿರುವ ಭಾಗವತ್ ಅವರು ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಸದ್ಯ ಮುಂಗೇರ್‌ನಲ್ಲಿ ನಡೆಯುತ್ತಿರುವ ವಿವಿಧ ಶಿಬಿರಗಳಲ್ಲಿ ಸುಮಾರು 700 ಸ್ವಯಂ ಸೇವಕರು ಭಾಗವಹಿಸಿದ್ದಾರೆ. ಸಂಘಟನಾ ಸಾಮರ್ಥ್ಯ, ನಾಯಕತ್ವ ಕೌಶಲಗಳು ಹಾಗೂ ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿರುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ ಎಂದೂ ಹೇಳಿವೆ.

