ಕಾಸರಗೋಡು: ಮದ್ಯದ ನಶೆಯಲ್ಲಿ ಮಸೀದಿಗೆ ಅತಿಕ್ರಮಿಸಿ ನುಗ್ಗಿ ಮಸೀದಿಮುಕ್ರಿ ಸೇರಿದಂತೆ ಮೂರು ಮಂದಿಗೆ ಇರಿದು ಗಾಯಗೊಳಿಸಿದ ಘಟನೆ ಪಯ್ಯನ್ನೂರು ಏಳಿಲೋಡ್ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಹಾಗೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಿಯಾದ್ ಅಬ್ದುಲ್ಲ ಎಂಬಾತನನ್ನು ಪರಿಯಾರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಈತನಿಂದ ಮೂರು ಚಾಕು, ಒಂದು ಕತ್ತರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸಿಯಾದ್ ಅಬ್ದುಲ್ಲ ನಡೆಸಿದ ದಾಂಧಲೆಯಿಂದ ಏಳಿಲೋಡ್ ಫಾರೂಕ್ ಜುಮಾ ಮಸೀದಿಯ ಮುಕ್ರಿ ಹಾಗೂ ಮಂಜೇಶ್ವರ ನಿವಾಸಿಯಾದ ಮುಹಮ್ಮದ್ ಆಶಿಕ್ (24), ಜಮಾಯತ್ ಪದಾಧಿಕಾರಿಯಾದ ನಸೀರ್ ಹನ್ನ (47), ಮಸೀದಿಗೆ ಪ್ರಾರ್ಥನೆಗಾಗಿ ತಲುಪಿದ ಕೆ.ಎಂ. ಸಮೀರ್ (37) ಎಂಬವರು ಗಾಯಗೊಂಡಿದ್ದು, ಇವರನ್ನು ಪಯ್ಯನ್ನೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ಮಸೀದಿಯ ಗಾಜನ್ನು ಹೊಡೆದು ಮುರಿದಿರುವುದಾಗಿ ದಊರಿನಲ್ಲಿ ತಿಳಿಸಲಾಗಿದೆ.

