HEALTH TIPS

ಮಾದಕ ದ್ರವ್ಯ ಮುಕ್ತ ತಮಿಳುನಾಡು: 6 ಕಿ.ಮೀ ಓಡಿ ಎಲ್ಲರ ಗಮನ ಸೆಳೆದ ಸಿಎಂ ವಿಜಯ್

 ಚೆನ್ನೈ: ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ (ಜೂನ್ 26) ಚೆನ್ನೈನ ಮರೀನಾ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದಾರೆ.

ಸಾವಿರಾರು ಕ್ರೀಡಾಪಟುಗಳೊಂದಿಗೆ ಬರೋಬ್ಬರಿ 6 ಕಿಲೋಮೀಟರ್ ಓಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 


'ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್' ಎಂಬ ಘೋಷಣೆಯಡಿ ಈ ಬೃಹತ್ ಜಾಗೃತಿ ಓಟವನ್ನು ಆಯೋಜಿಸಲಾಗಿತ್ತು.

ಮೊದಲು ಸಾಂಪ್ರದಾಯಿಕ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ವಿಜಯ್ ಅವರು ದಿಢೀರನೇ ವೇದಿಕೆಯಿಂದ ಕೆಳಗಿಳಿದು ಕ್ರೀಡಾಪಟುಗಳೊಂದಿಗೆ ಓಡಲು ಆರಂಭಿಸಿದರು.

ಕ್ರೀಡಾ ವಸ್ತ್ರ ಧರಿಸಿದ್ದ ವಿಜಯ್ ಎಲ್ಲಿಯೂ ನಿಲ್ಲದೆ ಸತತವಾಗಿ 6 ಕಿಲೋಮೀಟರ್‌ ದೂರದ ಓಟವನ್ನು ಪೂರ್ಣಗೊಳಿಸಿದರು. ಸಾಮಾಜಿಕ ಉದ್ದೇಶಕ್ಕಾಗಿ ಸಾರ್ವಜನಿಕರೊಂದಿಗೆ, ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಯುವಜನತೆಯೊಂದಿಗೆ ಇಷ್ಟು ದೂರ ಓಡಿದ ತಮಿಳುನಾಡಿನ ಮೊದಲ ಹಾಲಿ ಮುಖ್ಯಮಂತ್ರಿ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮ್ಯಾರಥಾನ್ ಆರಂಭಕ್ಕೂ ಮುನ್ನ ಪಾಲ್ಗೊಂಡಿದ್ದ ಸಾವಿರಾರು ಯುವಕರು ತಾವು ಎಂದಿಗೂ ಮಾದಕ ದ್ರವ್ಯಗಳನ್ನು ಬಳಸುವುದಿಲ್ಲ, ವ್ಯಸನಕ್ಕೆ ತುತ್ತಾದವರನ್ನು ಅದರಿಂದ ಮುಕ್ತಗೊಳಿಸಲು ನೆರವಾಗುತ್ತೇವೆ ಮತ್ತು ಇದರ ಕರಾಳತೆಯ ಬಗ್ಗೆ ಕುಟುಂಬ ಹಾಗೂ ಸ್ನೇಹಿತರಲ್ಲಿ ಅರಿವು ಮೂಡಿಸುತ್ತೇವೆ ಎಂದು ಪ್ರಮಾಣ ಮಾಡಿದರು. 











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries