ನವದೆಹಲಿ: ಶೇಕಡ 85ರಷ್ಟು ಎಥೆನಾಲ್ ಹೊಂದಿರುವ ಪೆಟ್ರೋಲ್ ಬಳಕೆಗೆ ಬೆಂಬಲ ನೀಡುವ ನೀತಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಹೀರೊ ಮೋಟೊಕಾರ್ಪ್ ಕಂಪನಿಯ ಕಾರ್ಯಕ್ರಮ ವೊಂದರಲ್ಲಿ ಅವರು ಮಾತನಾಡಿದ್ದಾರೆ.
ಕಂಪನಿಯು ಇ85 ಇಂಧನ (ಶೇ 85ರಷ್ಟು ಎಥೆನಾಲ್, ಶೇ 15ರಷ್ಟು ಪೆಟ್ರೋಲ್ ಇರುವ ಇಂಧನ) ಬಳಸುವ ದ್ವಿಚಕ್ರ ವಾಹನ ಸಿದ್ಧಪಡಿಸಿದ್ದು ಅದನ್ನು ಸಚಿವ ಪುರಿ ಅನಾವರಣ ಮಾಡಿದರು.
ಇ85 ಇಂಧನವು ಮಾಮೂಲಿ ಇಂಧನಕ್ಕಿಂತ ಬಹಳ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
2026-27ರಲ್ಲಿ ಇ85 ಇಂಧನ ವನ್ನು ಶೇ 1ರಷ್ಟು ಪ್ರಮಾಣದಲ್ಲಿ ಬಳಸಿದರೂ 4 ಕೋಟಿ ಲೀಟರ್ ಎಥೆನಾಲ್‌ಗೆ ಬೇಡಿಕೆ ಸೃಷ್ಟಿಯಾಗಲಿದೆ. 'ರೈತರು ಈಗ ಅನ್ನದಾತರಾಗಿದ್ದಾರೆ, ಅವರು ಇಂಧನದಾತರೂ ಆಗುತ್ತಾರೆ' ಎಂದು ಹೇಳಿದ್ದಾರೆ.

